ಫೋಕ್ಸ್‌ವ್ಯಾಗನ್ ಇಂಡಿಯಾದ ದೇಶೀಯ ಪೋರ್ಟ್‌ಫೋಲಿಯೊ ಮೂರು ಪ್ರಮುಖ ಮಾದರಿಗಳನ್ನು ಒಳಗೊಂಡಿದೆ. ಅದರಲ್ಲಿ ಟೈಗನ್ ಮತ್ತು ವರ್ಟಸ್ ಜನಪ್ರಿಯ ಮಾದರಿಗಳಾಗಿವೆ. ಕಂಪನಿಯ ಫ್ಲಾಗ್‌ಶಿಪ್ ಮಾದರಿಯಾಗಿ ಟಿಗ್ವಾನ್ ಮುಂದುವರಿದಿದ್ದು (Volkswagen Taigun), ಫೆಬ್ರವರಿ 2025 ರಲ್ಲಿ ಇದಕ್ಕೆ ಗರಿಷ್ಠ ರಿಯಾಯಿತಿ ದೊರೆಯುತ್ತಿದೆ.
ಟಿಗ್ವಾನ್ ಮಾಡೆಲ್ ಈಗ ಸುಮಾರು 4.2 ಲಕ್ಷ ರುಪಾಯಿ ರಿಯಾಯಿತಿ ಬೆಲೆಯಲ್ಲಿ ದೊರೆಯುತ್ತಿದೆ. ಗ್ರಾಹಕರು ನಗದು ರಿಯಾಯಿತಿಗಳು, ವಿನಿಮಯ ಬೋನಸ್ ಅಥವಾ ಸ್ಕ್ರ್ಯಾಪ್‌ಪೇಜ್ ಬೋನಸ್,(Scrappage bonus) ಮತ್ತು ಲಾಯಲ್ಟಿ ಬೋನಸ್‌ಗಳನ್ನು ಪಡೆಯಬಹುದು. ಈ ಲಾಭಗಳು ಹಳೆಯ ಮಾದರಿಗಳಿಗೆ ಮಾತ್ರ ಸೀಮಿತವಾಗಿಲ್ಲ, 2025 ಮಾಡೆಲ್‌ಗಳ ಮೇಲೂ ನೀಡಲಾಗುತ್ತಿದೆ.

ನೀವು ಯಾವ ನಗರದಲ್ಲಿ ಜೀವನ ಮಾಡುತ್ತಿದ್ದಿರೋ ಅದರ ಪ್ರಕಾರ ರಿಯಾಯಿತಿಗಳು ಬದಲಾಗಬಹುದು. ಇದು ಸ್ಟಾಕ್ ಲಭ್ಯತೆಯನ್ನೂ ಅವಲಂಬಿಸಿರುತ್ತದೆ. ಆದ್ದರಿಂದ, ನಿಮ್ಮ ಹತ್ತಿರದ ಫೋಕ್ಸ್‌ವ್ಯಾಗನ್ ಡೀಲರ್ ಸಂಪರ್ಕಿಸಿ ನಿಖರ ಮಾಹಿತಿ ಪಡೆಯುವುದು ಸೂಕ್ತ.
ಟಿಗ್ವಾನ್ ಮೇಲೆ ಗರಿಷ್ಠ 4.2 ಲಕ್ಷ ರಿಯಾಯಿತಿ
ಟಿಗ್ವಾನ್ ಕಾರಿನ ಮೇಲೆ ಗರಿಷ್ಠ 4.2 ಲಕ್ಷ ರಿಯಾಯಿತಿ ದೊರೆಯುತ್ತಿದೆ. ಇದರಲ್ಲಿ ಲಾಯಲ್ಟಿ ಬೋನಸ್, ನಗದು ರಿಯಾಯಿತಿ ಮತ್ತು ಸ್ಕ್ರ್ಯಾಪ್‌ಪೇಜ್ ಬೋನಸ್‌ಗಳು ಸೇರಿಕೊಂಡಿವೆ. ಐದು ಆಸನಗಳಿರುವ ಈ ಕಾರು 190 ಎಚ್‌ಪಿ ಸಾಮರ್ಥ್ಯದ 2.0-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಹೊಂದಿದ್ದು, 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್ ನೊಂದಿಗೆ ಲಭ್ಯವಿದೆ.
ಟಿಗ್ವಾನ್‌ಗೆ ಪರ್ಯಾಯವಾಗಿ ಫೋಕ್ಸ್‌ವ್ಯಾಗನ್ ಟೈರಾನ್ ಎಂಬ ಹೊಸ ಮಾದರಿಯನ್ನು ಈ ವರ್ಷ ಅಂದರೆ 2025 ರಲ್ಲೇ ಪರಿಚಯಿಸಲು ಯೋಜನೆ ಮಾಡುತ್ತಿದೆ. ಇದು ಟಿಗ್ವಾಣ್ ಮಾದರಿಯನ್ನು ನಿಲ್ಲಿಸುವ ಸೂಚನೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದೊಡ್ಡ ರಿಯಾಯಿತಿಗಳು ನೀಡಲಾಗುತ್ತಿವೆ.

ಟೈಗನ್ ನಲ್ಲಿ 2.2 ಲಕ್ಷ ರೂ ಉಳಿತಾಯ
ಟೈಗನ್ ಎಸ್‌ಯುವಿ ಭಾರತದಲ್ಲಿ ಉತ್ತಮ ಮಾರಾಟ ಹೊಂದಿರುವ ಕಾರುಗಳಲ್ಲಿ ಒಂದಾಗಿದ್ದು, ಇದರಲ್ಲಿ 1.0 ಲೀಟರ್ ಮತ್ತು 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ಗಳ ಆಯ್ಕೆಗಳಿವೆ. ಇದು ಹಸ್ತಚಾಲಿತ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್‌ಗಳೊಂದಿಗೆ ಲಭ್ಯವಿದೆ. ಈ ಕಾರು ಈಗ ಟೈಗನ್ ಸ್ಪೋರ್ಟ್ ಮತ್ತು ಟೈಗನ್ ಕ್ರೋಮ್ ಎಂಬ ಎರಡು ಪ್ರಮುಖ ಆವೃತ್ತಿಗಳಲ್ಲಿ ಲಭ್ಯವಿದೆ. 2024 ಮಾದರಿಯ ಟೈಗನ್ ಮೇಲಿನ ರಿಯಾಯಿತಿಗಳು 2 ರಿಂದ 2.2 ಲಕ್ಷ ರೂಪಾಯಿ ವರೆಗೂ ಇರಬಹುದು, ಆದರೆ ಇದು ಸ್ಟಾಕ್ ಲಭ್ಯತೆಯ ಮೇಲೆ ಅವಲಂಬಿತವಾಗಿದೆ.
2025 ಟೈಗನ್ ಮಾಡೆಲ್‌ನಲ್ಲಿ ಕಡಿಮೆ ರಿಯಾಯಿತಿ ದೊರೆಯುತ್ತಿದ್ದು, ಗರಿಷ್ಠ ₹80,000 ಲಾಭ ಪಡೆಯಬಹುದು. ಟೈಗನ್‌ನ ಬೆಲೆ ₹11.70 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಿದ್ದು, ಟಾಪ್ ಎಂಡ್ ದರ ₹19.73 ಲಕ್ಷ** ರೂಪಾಯಿ (ಎಕ್ಸ್-ಶೋ ರೂಂ) ಆಗಿದೆ.
ವರ್ಟಸ್ ಸೆಡಾನ್‌ಗೆ 1.7 ಲಕ್ಷ ರೂಪಾಯಿ ರಿಯಾಯಿತಿ
ವರ್ಟಸ್ ಸೆಡಾನ್ ಕೂಡ ಟೈಗನ್ ಮಾದರಿಯಂತೆಯೇ 1.0 ಲೀಟರ್ ಮತ್ತು 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 2024 ಮಾಡೆಲ್ ವರ್ಟಸ್ ಈಗ 1.7 ಲಕ್ಷ ರಿಯಾಯಿತಿಯೊಂದಿಗೆ ಲಭ್ಯವಿದೆ, ಹಿಂದಿನ 1.5 ಲಕ್ಷ ರಿಯಾಯಿತಿಯಲ್ಲಿನಷ್ಟು ಹೆಚ್ಚುವರಿ ಕೊಡುಗೆ ಇದೆ. ಆದರೆ ಇದು ಸ್ಟಾಕ್ ಲಭ್ಯತೆಯ ಮೇಲೆ ನಿರ್ಧರಿತವಾಗಿರುತ್ತದೆ. 2025 ಮಾಡೆಲ್ ವರ್ಟಸ್ ಮೇಲಿನ ರಿಯಾಯಿತಿಗಳು ಗರಿಷ್ಠ ₹80,000 ರುಪಾಯಿಗೆ ಸೀಮಿತ. ಈ ಕಾರಿನ ಬೆಲೆ ₹11.5 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಿದ್ದು, ಟಾಪ್ ಮಾದರಿ ₹19.39 ಲಕ್ಷ ರೂಪಾಯಿವರೆಗೆ ಹೋಗುತ್ತದೆ.
ಟೈಗನ್ ಮಾದರಿಯಂತೆ, ವರ್ಟಸ್ ಕೂಡ ಕ್ರೋಮ್ ಮತ್ತು ಸ್ಪೋರ್ಟ್ ಆವೃತ್ತಿಗಳಲ್ಲಿ ಲಭ್ಯವಿದೆ**.
ಫೇಸ್‌ಲಿಫ್ಟ್‌ಗೆ ತಯಾರಿ
ಫೋಕ್ಸ್‌ವ್ಯಾಗನ್ ಇಂಡಿಯಾ, ವರ್ಟಸ್ ಮತ್ತು ಟೈಗನ್ ಮಾಡೆಲ್‌ಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಅಭಿವೃದ್ಧಿಪಡಿಸುತ್ತಿರುವುದು ತಿಳಿದು ಬಂದಿದೆ. ಈ ಹೊಸ ಆವೃತ್ತಿಗಳು 2025 ಕೊನೆ ಅಥವಾ 2026 ಪ್ರಾರಂಭದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಹಳೆಯ ಮಾದರಿಗಳನ್ನು ವೇಗವಾಗಿ ಮಾರಾಟ ಮಾಡಲು ಈ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿರುವ ಸಾಧ್ಯತೆ ಇದೆ ಹೊಸ ಫೇಸ್‌ಲಿಫ್ಟ್ ಮಾದರಿಗಳು ಹೆಚ್ಚಿನ ವಿನ್ಯಾಸ ಬದಲಾವಣೆಗಳು ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರಲಿವೆ , ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳು ಹಾಳು ಮಾಡದೆ ಉಳಿಯುವ ನಿರೀಕ್ಷೆಯಿದೆ.
ಇದೇ ಸಮಯದಲ್ಲಿ, ಫೋಕ್ಸ್‌ವ್ಯಾಗನ್ ಈ ವರ್ಷ ಭಾರತದಲ್ಲಿ ಗಾಲ್ಫ್ ಜಿಟಿಐ ಹಾಟ್ ಹ್ಯಾಚ್ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಕಾರು ಇದೇ ತಿಂಗಳೊಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ವಿಶ್ವದಾದ್ಯಂತ ಜನಪ್ರಿಯವಾದ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಆಗಿದ್ದು, ಫೋಕ್ಸ್‌ವ್ಯಾಗನ್ ಬ್ರಾಂಡ್‌ನ ಪ್ರಭಾವವನ್ನು ಹೆಚ್ಚಿಸುವ ಮಾದರಿಯಾಗಿದೆ. ಇದನ್ನು ಸಂಪೂರ್ಣವಾಗಿ ಆಮದು ಮೂಲಕ ಭಾರತಕ್ಕೆ ತರಲಿದ್ದಾರೆ. ಈ ಕಾರಿನಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ (EA888 ಬಳಕೆಯಾಗುತ್ತಿದ್ದು, 265 bhp ಪರರ್ 370 Nm ಟಾರ್ಕ್ ಬಿಡುಗಡೆ ಮಾಡುತ್ತದೆ.