ಮಂಡ್ಯ : ಮಾಜಿ ಸಿಎಂ.ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯ ಅಪ್ಪಟ ಅಭಿಮಾನಿಯೋಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇವೇಗೌಡನ ದೊಡ್ಡಿ ಗ್ರಾಮದ ನಿವಾಸಿ ಮಹದೇವು ಮೃತ ಅಭಿಮಾನಿ. ಕುಮಾರಸ್ವಾಮಿ ಮತ್ತೆ ಸಿಎಂ.ಅಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಈತ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಹೆಚ್‌ಡಿಕೆಯ ಅಪ್ಪಟ ಅಭಿಮಾನಿಯಾಗಿದ್ದ

ಕುಮಾರಸ್ವಾಮಿ ಸಿಎಂ ಅಧಿಕಾರ ಕಳೆದು ಕೊಂಡಾಗ ಅವರು ಮತ್ತೆ ಸಿಎಂ ಆಗಬೇಕು, ಅವರು ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅದರಂತೆ ಅಂದಿನಿಂದಲೂ ಚಪ್ಪಲಿ ತೊಡದೆ ಎಲ್ಲಡೆ ಓಡಾಟ ಮಾಡುತ್ತಿದ್ದ ಅಭಿಮಾನಿ ಇದೀಗಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಪ್ಪಟ ಅಭಿಮಾನಿಯ ನಿಧನಕ್ಕೆ ಹೆಚ್‌ಡಿ ಕುಮಾರಸ್ವಾಮಿ ಸೇರಿಂದಂತೆ ಪಕ್ಷದ ನಾಯಕರು ಸಂತಾಪ ಸೂಚಿಸಿದ್ದಾರೆ. ಇಂದು ಮೃತ ಅಭಿಮಾನಿ ಮನೆಗೆ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ | ಅಮೆರಿಕ ವೀಸಾ ನಿರಾಕರಣೆ ; ಮನನೊಂದ ವೈದ್ಯೆ ಆತ್ಮಹತ್ಯೆ..!



















