ಉತ್ತರ ಕನ್ನಡ : ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿ ಒರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಂಗಿನಗುಂಡಿ ಕ್ರಾಸ್ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.
ಭಟ್ಕಳ ಫಿರ್ದೌಸ್ ನಗರ ನಿವಾಸಿ ಅನೀಸ್ ಮೊಹ್ತಿಶಂ ಎಂಬವರ ಪುತ್ರ ಮುಹಮ್ಮದ್ ಮೊಹ್ತೆಶಾಂ (18) ಮೃತಪಟ್ಟ ಯುವಕ.
ತೆಂಗಿನಗುಂಡಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದ್ದು, ಮುಹಮ್ಮದ್ ಮೊಹ್ತೆಶಾಂ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹೆದ್ದಾರಿ ಪ್ರವೇಶಿಸಿದ ವೇಳೆ ಕೇರಳದಿಂದ ಮುಂಬೈನತ್ತ ಸಾಗುತ್ತಿದ್ದ ಪ್ಲೈವುಡ್ ಲಾರಿ ಢಿಕ್ಕಿ ಹೊಡೆದಿದೆ. ಇದರಿಂದ, ಲಾರಿಯ ಚಕ್ರಗಳಡಿ ಸಿಲುಕಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಭಟ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.