ಅಹಮದಾಬಾದ್: ಅಹಮದಾಬಾದ್ ನಲ್ಲಿ ನಡೆದ ವಿಮಾನ ಪತನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 265ಕ್ಕೆ ಏರಿಕೆ ಕಂಡಿದೆ.
ಸೂರತ್ ನಲ್ಲಿ (Surat) ನಿಶ್ಚಿತಾರ್ಥ (Engagement) ಮುಗಿಸಿಕೊಂಡು ಲಂಡನ್ಗೆ ಹೊರಟಿದ್ದ ಜೋಡಿಯೊಂದು ಕೂಡ ಈ ಪತನದಲ್ಲಿ (Plane Crash) ಸಾವನ್ನಪ್ಪಿದೆ. ಹಾರ್ದಿಕ್ ಹಾಗೂ ವಿಭೂತಿ ಸಾವನ್ನಪ್ಪಿದ ದುರ್ದೈವಿಗಳು. ವಿಭೂತಿ ಲಂಡನ್ನಲ್ಲಿ ಫಿಸಿಯೋಥೆರಪಿ ಮಾಸ್ಟರ್ಸ್ ಮಾಡುತ್ತಿದ್ದರು. ಹಾರ್ದಿಕ್ ಲಂಡನ್ನಲ್ಲಿ ಅಮೆಜಾನ್ ಉದ್ಯೋಗಿಯಾಗಿದ್ದರು.
10 ದಿನ ರಜೆ ಹಾಕಿ ಎಂಗೇಜ್ಮೆಂಟ್ ಮಾಡಿಕೊಳ್ಳಲು ಊರಿಗೆ ಬಂದಿದ್ದರು. ಅದರಂತೆ ಎಂಗೇಜ್ಮೆಂಟ್ ಮುಗಿಸಿ ಮದುವೆಯ ಕನಸಿನಲ್ಲಿ ಮರಳಿ ಲಂಡನ್ ಗೆ ಹೊರಟಿದ್ದರು. ಆದರೆ, ವಿಧಿ ಅವರಿಬ್ಬರನ್ನು ಬಲಿ ಪಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.