ದೇಶದಲ್ಲಿ ಕ್ರಿಕೆಟ್ ಆಟಕ್ಕೆ ಇರುವಷ್ಟು ಗೌರವ ಮತ್ತೊಂದು ಆಟಕ್ಕೆ ಇಲ್ಲ. ಹೀಗಾಗಿ ಇಲ್ಲಿ ಕ್ರಿಕೆಟ್ ಆಟಗಾರರನ್ನು ತುಂಬಾ ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾರೆ. ಸಚಿನ್ ತೆಂಡೂಲ್ಕರ್ ಅಭಿಮಾನಿಗಳಿಗೆ ದೇವರಾಗಿದ್ದು, ಎಲ್ಲರಿಗೂ ಗೊತ್ತು. ಸದ್ಯ ಈ ಸಾಲಿಗೆ ಧೋನಿ ಬಂದು ನಿಂತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದಲ್ಲಿ ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಅವರಿಗೆ ಅದ್ಭುತವಾದ ಅಭಿಮಾನಿಗಳಿದ್ದಾರೆ. ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಐದು ಬಾರಿ ಟ್ರೋಫಿ ಗೆದ್ದಿರುವ ಮಾಹಿ ನಾಯಕತ್ವದಲ್ಲಿ ಆಡಿರುವ ಅಂಬಟಿ ರಾಯುಡು, ಚೆನ್ನೈನಲ್ಲಿ ಎಂಎಸ್ ಧೋನಿಯ ದೇವಸ್ಥಾನ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಭಾರತ ಮತ್ತು ಸಿಎಸ್‌ಕೆಗಾಗಿ ಅವರ ಪ್ರದರ್ಶನ ಪರಿಗಣಿಸಿ, ಎಂಎಸ್ ಧೋನಿ ಅವರ ದೇವಾಲಯವನ್ನು ಚೆನ್ನೈನಲ್ಲಿ ನಿರ್ಮಿಸಲಾಗುವುದು ಎಂದು ಅಂಬಟಿ ರಾಯುಡು ತಿಳಿಸಿದ್ದಾರೆ. ಕೆಲವು ವರ್ಷಗಳಲ್ಲಿ ರಜನಿಕಾಂತ್, ಖುಷ್ಬೂ ಸೇರಿದಂತೆ ದಕ್ಷಿಣದ ಜನಪ್ರಿಯ ತಾರೆಯರ ದೇವಾಲಯಗಳನ್ನು ಅಭಿಮಾನಿಗಳು ನಿರ್ಮಿಸಿದ್ದಾರೆ. ಧೋನಿ ಚೆನ್ನೈನ ದೇವರು ಎಂದ ರಾಯುಡು, ಮುಂಬರುವ ವರ್ಷದಲ್ಲಿ ಚೆನ್ನೈನಲ್ಲಿ ಎಂಎಸ್ ಧೋನಿ ಮಂದಿರ ನಿರ್ಮಾಣವಾಗುವುದು ಖಚಿತ ಎಂದು ಹೇಳಿದ್ದಾರೆ.
ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಈಗಾಗಲೇ ಸಿಎಸ್ ಕೆ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬೆಂಗಳೂರು ವಿರುದ್ಧ ತನ್ನ ಕೊನೆಯ ಪಂದ್ಯವಾಡಲಿದೆ.