ಬೆಂಗಳೂರು: ಮನೆಯಲ್ಲಿ ಪಾಲಕರು ಓದು ಅಂತಾ ಬುದ್ದಿ ಹೇಳಿದ್ದಕ್ಕೆ ವಿದ್ಯಾರ್ಥಿ ಮನೆಯನ್ನೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿನ ನಂದಿನ ಲೇಔಟ್ ನ ಜೈ ಮಾರುತಿ ನಗರದಲ್ಲಿ ನಡೆದಿದೆ. ಸರಿಯಾಗಿ ಗಮನ ಕೊಟ್ಟು ಓದುತ್ತಿಲ್ಲ (Study), ಹೋಮ್ ವರ್ಕ್ (Home Work) ಮಾಡುತ್ತಿಲ್ಲ ಎಂದು ತಾಯಿ (mother) ಬೈದಿದ್ದಕ್ಕೆ ಮಗ (Son) ಸಿಟ್ಟಾಗಿ ಮನೆ ಬಿಟ್ಟು ಹೋಗಿದ್ದಾನೆ. (student missing)
8 ವರ್ಷದ ಮಿಥುನ್ ಮನೆ ಬಿಟ್ಟು ಹೋಗಿರುವ ಬಾಲಕ. ಈತ ದೇವರಾಜ್ ಹಾಗೂ ಜಯಲಕ್ಷ್ಮಿ ಎಂಬ ದಂಪತಿಯ ಮಗ. ಮಿಥುನ್ ಹೋಮ್ ವರ್ಕ್, ಕ್ಲಾಸ್ ವರ್ಕ್ ಕಂಪ್ಲೀಟ್ ಮಾಡಿಲ್ಲ ಎಂದು ಈತನ ಸ್ಕೂಲ್ ಡೈರಿಯಲ್ಲಿ ಅವರ ಮಿಸ್ ಬರೆದು ಕಳುಹಿಸಿದ್ದರು. ಹೀಗಾಗಿ ಕೋಪಗೊಂಡ ತಾಯಿ, ನಿನಗಾಗಿ ನಾವು ಇಷ್ಟೆಲ್ಲ ಕಷ್ಟ ಪಡುತ್ತೇವೆ. ನೀನು ಸರಿಯಾಗಿ ಅಭ್ಯಾಸ ಮಾಡಲ್ಲ ಎಂದು ಬೇಸರಿಂದ ಬುದ್ಧಿ ಹೇಳಿದ್ದಾರೆ.
ಅಲ್ಲದೇ, ಶಾಲೆಯಲ್ಲಿ ಕೊಟ್ಟಿರುವ ಎಲ್ಲ ಹೋಮ್ ವರ್ಕ್ ಮುಗಿಸಿ ಮಲಗಬೇಕು ಎಂದು ಹೇಳಿದ್ದಾರೆ. ಇದರಿಂದಾಗಿ ನೊಂದ ಬಾಲಕ ಮಿಥುನ್ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಗುರುವಾರ ಸಂಜೆ 6 ಗಂಟೆಗೆ ಈತ ಮನೆ ಬಿಟ್ಟು ಹೋಗಿದ್ದಾನೆ. ಸ್ಕೂಲ್ ನಿಂದ ಬಂದ ಕೂಡಲೇ ಬಟ್ಟೆ ಹಾಗೂ ಮೊಬೈಲ್ ತೆಗೆದುಕೊಂಡು ಹೊರಟು ಹೋಗಿದ್ದಾನೆ. ಸದ್ಯ ಗಾಬರಿಗೊಂಡಿರುವ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.