ಮುಂಬೈ: ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ತಲುಪದೇ ಹೋದರೆ ಒಳಗೆ ಬಿಡುವುದಿಲ್ಲ. ಆದರೆ, ಭಾರತದ ನಗರದ ಟ್ರಾಫಿಕ್ ಪರಿಸ್ಥಿತಿಯಲ್ಲಿ ಕೆಲವರು ತಡವಾಗಿ ಪರೀಕ್ಷೆ ತಪ್ಪಿಸಿಕೊಂಡಿದ್ದ ಪ್ರಕರಣಗಳು ನಡೆದಿವೆ. ಈ ಸಮಸ್ಯೆಗೆ ಪರಿಹಾರ ಎಂಬುದಿಲ್ಲ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ವಿಭಿನ್ನ ಯೋಜನೆ ಮೂಲಕ ತಡವಾಗುವ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದಾನೆ. ಈಗ ಘಟನೆ ಸೋಶಿಯಿಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ವಾಯ್ ತಾಲ್ಲೂಕಿನ ಪಸರಾನಿ ಗ್ರಾಮದ ವಿದ್ಯಾರ್ಥಿ ಹೊಸ ಐಡಿಯಾ ಮಾಡಿದವ. ಆತ ಕಾಲೇಜಿಗೆ ಪ್ಯಾರಾಗ್ಲೈಡಿಂಗ್ ಮೂಲಕ ಪರೀಕ್ಷೆ ಬರೆಯಲು ಬಂದಿದ್ದಾನೆ. ಆತ ತನ್ನ ಕಾಲೇಜು ಬ್ಯಾಗ್ ಧರಿಸಿ ಹಾರುತ್ತಾ ಕಾಲೇಜಿಗೆ ಹೋಗುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ಸತಾರಾ ಜಿಲ್ಲೆಯ ಪಸರಾನಿ ಗ್ರಾಮದ ಸಮರ್ಥ್ ಮಹಾಂಗಡೆ ಹಾರಿಕೊಂಡು ಬಂದ ವಿದ್ಯಾರ್ಥಿ. ವಾಯ್-ಪಂಚಗಣಿ ರಸ್ತೆಯ ಪಸಾರಾಣಿ ಘಾಟ್ ವಿಭಾಗದಲ್ಲಿ ಭಾರಿ ಸಂಚಾರ ದಟ್ಟಣೆಯಿಂದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಅಸಾಧ್ಯವಾಗಿತ್ತು. ಆತಂಕದಲ್ಲಿದ್ದ ಆತನಿಗೆ ಪಂಚಗಣಿಯ ಜಿಪಿ ಅಡ್ವೆಂಚರ್ಸ್‍ನ ಸಾಹಸ ಕ್ರೀಡಾ ತಜ್ಞ ಗೋವಿಂದ್ ಯೆವಾಲೆ ನೆರವು ನೀಡಿದ್ದಾರೆ.
ಅನುಭವಿ ಪ್ಯಾರಾಗ್ಲೈಡಿಂಗ್ ತರಬೇತುದಾರರ ಸಹಾಯದಿಂದ ಅವನು ಕಾಲೇಜಿನ ಬಳಿ ಇಳಿದಿದ್ದಾನೆ. ಇದರಿಂದ ಅವನಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿದೆ. ಆತನ ವಿಡಿಯೊಗೆ ವೀಕ್ಷಣೆಗಳುಸಿಕ್ಕಿವೆ. ಅನೇಕ ನೆಟ್ಟಿಗರು ಹುಡುಗನಿಗೆ ಸಹಾಯ ಮಾಡಿದ ಸಾಹಸ ಕ್ರೀಡಾ ತಂಡವನ್ನು ಹೊಗಳಿದ್ದಾರೆ.