ಉತ್ತರ ಕನ್ನಡ: ಸಿಆರ್.ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನಿಂದ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ನಡೆದಿದೆ.
ಅತ್ಯಾಚಾರಕ್ಕೆ ಯತ್ನಿಸಿದ ಯೋಧ ಸಂಬಂಧದಲ್ಲಿ ಅಕ್ಕನ ಗಂಡನ ಸಹೋದರ ಎನ್ನಲಾಗಿದೆ. ಆರೋಪಿಯನ್ನು ಕೊಟ್ರೇಶ್ (46 ವರ್ಷ) ಎನ್ನಲಾಗಿದೆ. ಆರೋಪಿಯ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ರೇಣುಕಾ ಪಟ್ಟೇದ (40 ವರ್ಷ) ಎಂಬುವವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಧಾರವಾಡದ ಅಣ್ಣಿಗೇರಿ ಮೂಲದ ಯೋಧನಾದ ಕೊಟ್ರೇಶ್, ಅಕ್ಕನ ಹತ್ತಿರ ಕರೆದುಕೊಂಡು ಹೋಗುವುದಾಗಿ ಹೇಳಿ ಸಿದ್ದಾಪುರ ತಾಲೂಕಿನ ಕಬ್ಬಿನಹೊಳೆ ಹತ್ತಿರ ಬರುತ್ತಿದ್ದಂತೆ ಕೃತ್ಯಕ್ಕೆ ಯತ್ನಿಸಿದ್ದಾನೆ. ಮಹಿಳೆ ಒಪ್ಪದಿದ್ದಾಗ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.