ಹಾವೇರಿ: ಭಾರತ ಯುದ್ದದ ಹಿನ್ನೆಲೆ ಜಿಲ್ಲೆಯ ಮೂಲದ ಯೋಧನಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೈನ್ಯದಿಂದ ಕರೆ ನೀಡಲಾಗಿದೆ.

ಹಿರೇಕೆರೂರು ಪಟ್ಟಣದ ವಿವೇಕಾನಂದ ನಗರದ ನಿವಾಸಿಯಾಗಿರುವ ಜಗದೀಶ್ ಪಂಜಾಬ್ನಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕೆಲ ತಿಂಗಳ ಹಿಂದೆ ಒಡಿಸಾ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅನಾರೋಗ್ಯದ ಹಿನ್ನೆಲೆ ಸ್ವಗ್ರಾಮಕ್ಕೆ ಬಂದಿದ್ದರು. ಯುದ್ಧದ ಕಾರ್ಮೋಡದ ಹಿನ್ನೆಲೆ ಸೇನೆಯಿಂದ ಕರೆ ನೀಡಲಾಗಿದೆ. ಇಂದು ಯೋಧ ಜಗದೀಶ್ ಒಡಿಶಾಗೆ ತೆರಳಿ ಸೇವೆಗೆ ಹಾಜರಾಗಿದ್ದಾರೆ.