ಕ್ರೂರಿಯೊಬ್ಬಾತ ತನ್ನ ಪ್ರೆಯಸಿಯ ಶವದೊಂದಿಗೆ ಆಕೆಯ ಇಬ್ಬರು ಮಕ್ಕಳನ್ನೂ ನದಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಪುಣೆಯಲ್ಲಿ ಈ ವಿದ್ರಾವಕ ಘಟನೆ ನಡೆದಿದೆ. ಮಹಿಳೆಯೊಬ್ಬಳು ತನ್ನ ಗಂಡನನ್ನು ತೊರೆದು ಇಬ್ಬರು ಮಕ್ಕಳೊಂದಿಗೆ ಪ್ರಿಯಕರನ ಜತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಳು. ಪತಿ ಸರಿ ಇಲ್ಲದ ಹಿನ್ನೆಲೆಯಲ್ಲಿ ಆಕೆ ತನ್ನ ಜೀವನಕ್ಕೆ ಆಸರೆಯಾಗುತ್ತಾನೆಂದು ಭಾವಿಸಿ ಎಲ್ಲವನ್ನೂ ಅರ್ಪಿಸಿದ್ದಳು ಎನ್ನಲಾಗಿದೆ.
ಇತ್ತೀಚೆಗೆ ಆಕೆ ಗರ್ಭಿಣಿಯಾಗದ್ದಳು. ಆದರೆ, ವ್ಯಕ್ತಿಗೆ ಮಾತ್ರ ಮಗು ಆಗುವುದು ಇಷ್ಟವಿರಲಿಲ್ಲ ಹೀಗಾಗಿ ಆಕೆಗೆ ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ, ಈ ವೇಳೆ ಮಹಿಳೆ ಸಾವನ್ನಪ್ಪಿದ್ದಾಳೆ. ನಂತರ ಸ್ನೇಹಿತರೊಂದಿಗೆ ಸೇರಿ ಆಕೆಯ ಮೃತದೇಹವನ್ನು ನದಿಗೆ ಎಸೆದಿದ್ದಾನೆ. ಈ ವೇಳೆ ಅದನ್ನು ಕಂಡು ಮಕ್ಕಳು ಅಳಲು ಆರಂಭಿಸಿದ್ದಾರೆ. ಆದರೆ, ಹೃದಯವಿಲ್ಲದ ಪಾಪಿ, ಮಕ್ಕಳನ್ನೂ ನದಿಗೆ ಎಸೆದಿದ್ದಾನೆ.
ಮೃತ ಮಹಿಳೆಯ ತಾಯಿಯು ತನ್ನ ಮಗಳು ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಕ್ಕಳನ್ನೂ ಕೊಲೆ ಮಾಡಿರುವ ಸಂಗತಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.