ಗುಬ್ಬಿ : ಗುಬ್ಬಿ ತಾಲ್ಲೂಕಿನ ಶಿವನೇಹಳ್ಳಿ ರಸ್ತೆಯನ್ನು ಸರಿಪಡಿಸಿಬೇಕೆಂದು ಗ್ರಾಮಸ್ಥರು ಧಿಡೀರ್ ರಸ್ತೆಗೆ ಪೈರು ಹಾಗೂ ಬಾಳೆ ಇಟ್ಟು ರಸ್ತೆ ತಡೆದು ಪ್ರತಿಭಟನೆ ನೆಡಸಿದ್ದಾರೆ.
ಈ ವೇಳೆ ಗ್ರಾಮದ ಮುಖಂಡ ಶಿವನೇಹಳ್ಳಿ ಮಲ್ಲೇಶ್ ಮಾತನಾಡಿ, ಈ ರಸ್ತೆಗೆ ಡಾಂಬರು ಕಂಡು ಸುಮಾರು 30 ವರ್ಷಗಳೇ ಕಳೆದಿವೆ. ಕಿರಣ್ ಕುಮಾರ್ ಶಾಸಕರಾಗಿದ್ದಾಗ ಮಾಡಿದ ರಸ್ತೆ ಬಿಟ್ಟರೇ ಇದು ವರೆಗೂ ಕ್ಷೇತ್ರದ ಶಾಸಕರು, ಸಂಸದರು ಜನಪ್ರತಿನಿಧಿಗಳು ಇತ್ತ ಕಡೆ ತಿರುಗಿ ನೋಡುತ್ತಿಲ್ಲ. ಅಕ್ಕಪಕ್ಕದ ಗ್ರಾಮಗಳಲ್ಲಿನ ರಸ್ತೆಗಳನ್ನು ಮಾಡುತ್ತಿದ್ದಾರೆ. ಆದರೆ, ಆದರೆ ಶಿವನೇಹಳ್ಳಿ ರಸ್ತೆ ಮಾತ್ರ ಕಣ್ಣಿಗೆ ಕಾಣುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಜನಪ್ರತಿ ನಿಧಿಗಳು ಆಶ್ವಾಸನೆ ಕೊಟ್ಟು ಮತ ಹಾಕಿಸಿಕೊಳ್ಳುತ್ತಾರೆ. ಆನಂತರ ಇತ್ತ ತಿರುಗಿಯೂ ನೋಡುತ್ತಿಲ್ಲ ಎದು ಆಕ್ರೋಶ ವ್ಯಕ್ತಪಡಿಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿದ್ದಣ್ಣ, ದಿಲೀಪ್, ಚಂದ್ರಣ್ಣ, ವಿರುಪಾಕ್ಷ, ಜಯಣ್ಣ, ನಂಜಪ್ಪ, ಕಿರಣ್, ಉಮೇಶ್ ಸೇರಿದಂತೆ ಹಲವರು ಇದ್ದರು.