ಬೆಂಗಳೂರು: ಮದುವೆ ಸಂಭ್ರಮದಲ್ಲಿದ್ದವನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ಬೆಂಗಳೂರಿನ (Bengaluru) ಬಿಜಿಎಸ್ ಲೇಔಟ್ ನ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕೊಲೆಯಾಗಿರುವ ವ್ಯಕ್ತಿ ರಿಯಲ್ ಎಸ್ಟೇಟ್ ಉದ್ಯಮಿ (Real Estate Entrepreneur)ಯಾಗಿದ್ದ ಎನ್ನಲಾಗದೆ. ಅಲ್ಲದೇ, ಈ ವ್ಯಕ್ತಿ ಮಾಗಡಿ ಶಾಸಕರ ಆಪ್ತ ಎನ್ನಲಾಗಿದೆ. ಲೋಕನಾಥ್ ಸಿಂಗ್ (37) ಹತ್ಯೆಯಾದ ಉದ್ಯಮಿ.
ಹತ್ಯೆಯಾಗಿರುವ ಲೋಕನಾಥ್ ಸಿಂಗ್ ಮದುವೆ ತಯಾರಿ ಕೂಡ ನಡೆಸಿದ್ದರು. ಇದೇ ತಿಂಗಳು ಮದುವೆ ಕೂಡ ಫಿಕ್ಸ್ ಆಗಿತ್ತು ಎನ್ನಲಾಗಿದೆ. ಆದರೆ, ದುಷ್ಕರ್ಮಿಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಲೋಕನಾಥ್ ಸ್ಥಳದಲ್ಲೇ ಬಲಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಸೋಲದೇವನಹಳ್ಳಿ (Soladevanahalli) ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.