ಬೆಂಗಳೂರು: ಚಲಿಸುತ್ತಿದ್ದ ರೈಲಿನಿಂದ(train) ವ್ಯಕ್ತಿಯೊಬ್ಬ ಕೆಳಗೆ ಜಿಗಿದ ಘಟನೆ ನಡೆದಿದೆ.
ಮೆಜೆಸ್ಟಿಕ್ ನಿಂದ ಮಲ್ಲೇಶ್ವರಂ(Malleswaram) ಮಾರ್ಗವಾಗಿ ಹೋಗುತ್ತಿದ್ದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ವ್ಯಕ್ತಿಯು ಸುಮಾರು ಇಪ್ಪತೈದು ಅಡಿಯಿಂದ ಮೂವತ್ತು ಅಡಿ ಎತ್ತರದ ಸೇತುವೆ ಮೇಲಿಂದ ಕೆಳಗೆ ಜಿಗಿದಿದ್ದಾನೆ. ರೈಲಿನಿಂದ (train) ಕೆಳಗೆ ಬಿದ್ದ ರಭಸಕ್ಕೆ ಸೊಂಟ ಮತ್ತು ಬಲಭಾಗದ ಕಾಲಿಗೆ ತೀವ್ರ ಗಾಯಗಳಾಗಿವೆ.
ಕುಡಿದ ಅಮಲಿನಲ್ಲಿ ರೈಲಿನಿಂದ ಕೆಳಗೆ ಜಿಗಿದಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತಿ ಹೆಸರು ಮತ್ತು ವಿಳಾಸ ಪತ್ತೆ ಆಗಿಲ್ಲ. ಶೇಷಾದ್ರಿಪುರಂ ಪೊಲೀಸ್ ಠಾಣಾ(Seshadripuram Police Station) ವ್ಯಾಪಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.