ಕ್ರೀಡಾ ಕೇಂದ್ರದಲ್ಲಿ ವ್ಯಾಯಾಮ ಮಾಡುತ್ತಿದ್ದವರ ಮೇಲೆ ವ್ಯಕ್ತಿಯೊಬ್ಬ ಕಾರು ಹರಿಸಿದ ಪರಿಣಾಮ ಬರೋಬ್ಬರಿ 35 ಜನ ಸಾವನ್ನಪ್ಪಿ, 43 ಜನ ಗಾಯಗೊಂಡಿರುವ ಘಟನೆ ನಡೆದಿದೆ.
ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 35 ಜನ ಸಾವನ್ನಪ್ಪಿ, 43 ಜನ ಗಾಯಗೊಂಡಿದ್ದಾರೆಂದು ಅಲ್ಲಿನ ವರದಿ ತಿಳಿಸಿವೆ.
ನಗರದಲ್ಲಿ ವಾರ್ಷಿಕವಾಗಿ ಆಯೋಜಿಸಲಾಗುವ ಪೀಪಲ್ಸ್ ಲಿಬರೇಶನ್ ಆರ್ಮಿ ದೇಶದ ಪ್ರಮುಖ ವಾಯುಯಾನ ಪ್ರದರ್ಶನ ನಡೆಯುವ ಹಿಂದಿನ ದಿನ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೀಡಾ ಕೇಂದ್ರದಲ್ಲಿ 62 ವರ್ಷದ ವ್ಯಕ್ತಿಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ಇದು ಕೊಲೆ ಸಂಚೋ ಅಥವಾ ಅಪಘಾತವೋ? ಎಂಬುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ.