ವ್ಯಕ್ತಿಯೊಬ್ಬ ನನ್ನ ಕಾರಿನಲ್ಲಿ ಕುಳಿತುಕೊಳ್ಳುವ ಯೋಗ್ಯತೆ ನಿನಗಿಲ್ಲ ಎಂದು ನಡುರಸ್ತೆಯಲ್ಲೇ ಪತ್ನಿಯನ್ನು ಕಾರಿನಿಂದ ಇಳಿಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಈ ಘಟನೆ ನಡೆದಿದೆ. ಮಗುವಿಗೆ ಅನಾರೋಗ್ಯದ ಕಾರಣ ಪತಿ ಹಾಗೂ ಪತ್ನಿ ವೈದ್ಯರ ಬಳಿ ತೆರಳುವಾಗ ಈ ಘಟನೆ ನಡೆದಿದೆ. ನಂತರ ಮನೆಗೆ ಮರಳಿದ ಪತ್ನಿಯನ್ನು ಮನೆಗೆ ಸೇರಿಸಿಲ್ಲ ಎನ್ನಲಾಗಿದೆ. ಹೀಗಾಗಿ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ವಿಷಯ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಪತ್ನಿಯ ಮನೆಯವರು ವರದಕ್ಷಿಣೆಯಾಗಿ ಕಾರು ಕೊಡಿಸಿಲ್ಲ ಎಂಬ ಕಾರಣಕ್ಕೆ ನನ್ನ ಕಾರಿನಲ್ಲಿ ಕೂರಬೇಡ, ಆ ಅರ್ಹತೆ ನಿನಗಿಲ್ಲ ಎಂದಿದ್ದಾನೆ ಎನ್ನಲಾಗಿದೆ. ಆದರೂ ಇಷ್ಟು ದಿನ ನಿನ್ನನ್ನು ಸಾಕಿದ್ದೇ ನನ್ನ ದೊಡ್ಡತನ. ಇದು ನಾನು ಸ್ವಂತ ಹಣದಿಂದ ಖರೀದಿಸಿದ ಕಾರು. ಹೀಗಾಗಿ ಕೆಳಗೆ ಎಂದು ಪತ್ನಿಯನ್ನು ಇಳಿಸಿ, ಮಗುವನ್ನು ಕರೆದುಕೊಂಡು ಪತ್ನಿ ಸಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
2020ರಲ್ಲಿ ಈ ಮಹಿಳೆ ನೋಯ್ಡಾದ ವಿಕಾಸ್ ಸೋಂಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು. ಮಹಿಳೆಯ ಪೋಷಕರು 12 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ. ಮದುವೆ ವೇಳೆ ವರದಕ್ಷಿಣೆ ರೂಪದಲ್ಲೂ ಹಣ ನೀಡಿದ್ದಾರೆ. ಆದರೆ ಮದುವೆಯಾದ ದಿನದಿಂದ ಪತಿ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಅಲ್ಲದೇ, ಪತಿಯ ತಂದೆ, ತಾಯಿ ಹಾಗೂ ಸಹೋದರಿಯರ ವಿರುದ್ಧವೂ ಪ್ರಕರಣ ದಾಖಲಾಗಿದೆ.