ಚಿಕ್ಕಮಗಳೂರು: ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಕಿಚ್ಚಬ್ಬಿ ಎಂಬಲ್ಲಿ ನಡೆದಿದೆ. ತೃಪ್ತಿ(25) ಕೊಲೆಯಾಗಿರುವ ದುರ್ದೈವಿ. ಚಿರಂಜೀವಿ ಕೊಲೆ ಮಾಡಿರುವ ಆರೋಪಿ. ಕೊಲೆ ಮಾಡಿದ ನಂತರ ಕೃಷಿ ಹೊಂಡಕ್ಕೆ ಶವ ಎಸೆದು ಪರಾರಿಯಾಗಿದ್ದಾನೆ.
ತೃಪ್ತಿ ಮತ್ತು ಚಿರಂಜೀವಿ ಫೇಸ್ ಬುಕ್ ಮೂಲಕ ಪರಿಚಯವಾಗಿ ನಂತರ ಪರಸ್ಪರ ಪ್ರೀತಿಸುತ್ತಿದ್ದರು. ಮಹಿಳೆಯರು ಇತ್ತೀಚೆಗೆ ಪತಿಯನ್ನು ಬಿಟ್ಟು ಆರೋಪಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಹೀಗಾಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಪೊಲೀಸರು ಇಬ್ಬರನ್ನೂ ವಿಜಯಪುರದಲ್ಲಿ ಹುಡುಕಿ ಕರೆ ತಂದಿದ್ದರು. ಆನಂತರ ನಡೆದ ಸಂಧಾನದಲ್ಲಿ ತೃಪ್ತಿ, ತನ್ನ ಪತಿಯೊಂದಿಗೆ ಹೋಗಿದ್ದಳು. ಇದರಿಂದ ಕೋಪಗೊಂಡ ಆರೋಪಿ, ಹತ್ಯೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಾಳೆಹೊನ್ನೂರು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.