ಹಾಸನ : ದೈತ್ಯಾಕಾರದ ಒಂಟಿಸಲಗವೊಂದು ಆಹಾರ ಅರಸಿ ಮನೆಯ ಬಾಗಿಲಿಗೆ ಬಂದು ಸೊಂಡಲಿನಿಂದ ಮನೆಯ ಬಾಗಿಲು ಬಡಿದ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಶಾಂತಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜಯ್ಯ ಎಂಬುವವರ ತೋಟದ ಮನೆಯ ಬಳಿ ರಾತ್ರಿ ಒಂಟಿಸಲಗ ಬಂದಿದೆ.
ಶಬ್ದ ಮಾಡುತ್ತಾ ಮನೆಯ ಸುತ್ತಲೂ ಓಡಾಡಿದ ಕಾಡಾನೆಯನ್ನು ಕಂಡು ಮನೆಯಲ್ಲಿ ಇದ್ದ ರಾಜಯ್ಯ, ಪತ್ನಿ ಹಾಗೂ ಪುತ್ರ ಭಯಭೀತರಾಗಿ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕರೆ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಫೋನ್ ರಿಸೀವ್ ಮಾಡದೆ ಬೇಜಬ್ದಾರಿ ಪ್ರದರ್ಶಿಸಿದ್ದಾರೆ.
ಶಬ್ದ ಕೇಳಿ ಮನೆಯಿಂದ ಹೊರಗೆ ಬಂದಿದ್ದರೆ ದೊಡ್ಡ ಅನಾಹುತ ನಡೆಯುತ್ತಿತ್ತು, ಆದರೆ ಸಿಸಿಟಿವಿ ನೋಡಿದಾ ಬಳಿಕ ಒಂಟಿಸಲಗ ಬಂದಿರುವುದು ಬೆಳಕಿಗೆ ಬಂದಿದ್ದರಿಂದ ಕುಟುಂಬಸ್ಥರು ಎಚ್ಚೆತ್ತುಕೊಂಡಿದ್ದಾರೆ.