ಕುಶಾಲನಗರ: ಒಂಟಿಸಲಗವೊಂದು ಮಡಿಕೇರಿ- ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನಗಳನ್ನ ತಡೆದ ಘಟನೆ ನಡೆದಿದೆ. ಇದರಿಂದಾಗಿ ಕೆಲ ಹೊತ್ತು ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಜಿಲ್ಲೆಯ ಆನೆಕಾಡು ಸಮೀಪದ ಮೆಟ್ನಳ್ಳ ಬಳಿ ಇಳಿಜಾರಿನಲ್ಲಿ ಕಾಡಾನೆಯೊಂದು ಕಾಡಿನಿಂದ ಹೊರಬಂದು ಹೆದ್ದಾರಿಯಲ್ಲಿ ಅಡ್ಡಾಡಿ ವಾಹನಗಳನ್ನು ತಡೆದು ನಿಲ್ಲಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಪುಂಡಾಟ ಕಂಡ ವಾಹನ ಸವಾರರು ಕೆಲಕಾಲ ಗಲಿಬಿಲಿಗೊಂಡಿದ್ದಾರೆ. ಒಂಟಿ ಸಲಗದ ಈ ಪುಂಡಾಟ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರೊಂದರ ಡ್ಯಾಷ್ ಕ್ಯಾಮರದಲ್ಲಿ ಸೆರೆಯಾಗಿದೆ.