ಕಾರವಾರ : ಸಮುದ್ರ ತೀರ ಭಾಗಕ್ಕೆ ಲಕ್ಷಾಂತರ ಮೀನುಗಳು ಬಂದಿದ್ದು, ಮೀನುಗಾರರಿಗೆ ಭರ್ಜರಿ ಬೇಟೆ ಸಿಕ್ಕಿದೆ. ಹಲವು ತಿಂಗಳ ಹವಾಮಾನ ಬದಲಾವಣೆಯಿಂದ ಸಂಪೂರ್ಣ ನೆಲ ಕಚ್ಚಿದ್ದ ಮೀನುಗಾರಿಕೆ ಇನ್ನೇನು ಮತ್ತೆ ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಅರಬ್ಬಿ ಸಮುದ್ರದಲ್ಲಿ ಮೀನುಗಾರರಿಗೆ ಭರ್ಜರಿ ಮತ್ಸ್ಯ ಬೇಟೆಯಾಗುತ್ತಿದೆ.

ಸಮುದ್ರದಲ್ಲಿ ಮೀನುಗಳ ದಂಡೇ ಹರಿದು ಬರುತ್ತಿದ್ದು, ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಾರವಾರ, ಬೇಲಿಕೇರಿ, ಮುದಗ ಬಂದರಿನಿಂದ ಹೊರಟ ಮೀನುಗಾರರು ಅರಬ್ಬಿ ಸಮುದ್ರದಲ್ಲಿ ರಾಶಿ ರಾಶಿ ಭೂತಾಯಿ ಮೀನುಗಳನ್ನು ಬೇಟೆಯಾಡಿದ್ದಾರೆ.

ಕಾರವಾರ ಸಮೀಪದ ಅರಬ್ಬಿ ಸಮುದ್ರ ಭಾಗದಲ್ಲಿ ಲಕ್ಷಾಂತರ ಭೂತಾಯಿ ಮೀನುಗಳು ಸಿಕ್ಕಿದ್ದು, ಆಳ ಸಮುದ್ರಕ್ಕೆ ತೆರಳದೇ ತೀರ ಸಮೀಪದಲ್ಲೇ ರಾಶಿ ರಾಶಿ ಮೀನುಗಳನ್ನು ಮೀನುಗಾರರು ಹಿಡಿದಿದ್ದಾರೆ. ಹಲವು ವರ್ಷದ ನಂತರ ಈ ಮಟ್ಟದ ಭೂತಾಯಿ ಮೀನುಗಳು ಮೀನುಗಾರರಿಗೆ ದೊರೆತಿದ್ದು, ಸದ್ಯ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ : ಕೌಟುಂಬಿಕ ಕಲಹ | ಮಾತುಕತೆಗೆಂದು ಕರೆಸಿ ಕೊಂದೇ ಬಿಟ್ರು.. ಆರೋಪಿಗಳು ಅರೆಸ್ಟ್



















