ಮಹಾರಾಷ್ಟ್ರದ ಅಮರಾವತಿ ಕೇಂದ್ರ ಕಾರಾಗೃಹದಲ್ಲಿ ಭಾರಿ ಸ್ಫೋಟ(Blast) ಸಂಭವಿಸಿದ್ದು, ಕೈದಿಗಳಲ್ಲಿ ಆತಂಕ ಮನೆ ಮಾಡಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದ್ದರ ಕುರಿತು ವರದಿಯಾಗಿಲ್ಲ. ಕೂಡಲೇ ಅಮರಾವತಿ ಸಿಪಿ-ಡಿಸಿಪಿ ಹಾಗೂ ಬಾಂಬ್ ನಿಷ್ಕ್ರಿಯ ದಳದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಆರು ಮತ್ತು ಏಳನೇ ಸಂಖ್ಯೆಯ ಬ್ಯಾರಕ್ ನ ಹೊರಗೆ ಕಂಟ್ರಿ ಮೇಡ್ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯ ನಂತರ ಜೈಲು ಆವರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಜೈಲು ಅಧಿಕಾರಿಗಳು, ಅಮರಾವತಿ ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಸೇರಿದಂತೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿತು.
ಘಟನೆಯ ತನಿಖೆಗೆ ತಕ್ಷಣವೇ ವಿಧಿವಿಜ್ಞಾನ ತಂಡವನ್ನು ಕರೆಯಲಾಯಿತು. ಹೆದ್ದಾರಿಯ ಮೋರಿಯಿಂದ ಚೆಂಡಿನ ಮೂಲಕ ಬಾಂಬ್ ಎಸೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಎಸೆದ ವ್ಯಕ್ತಿ ಯಾರು ಹಾಗೂ ಅದರ ಹಿಂದಿನ ಕಾರಣ ಏನು ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕುರಿತು ಬಾಲ್‌ಗಳಲ್ಲಿ ಗಾಂಜಾ ಪತ್ತೆಯಾಗಿತ್ತು ಎಂದು ಪೊಲೀಸ್ ಆಯುಕ್ತ ನವೀನಚಂದ್ರ ರೆಡ್ಡಿ ತಿಳಿಸಿದ್ದಾರೆ. ಅದೇ ರೀತಿ ಜಿಲ್ಲಾ ಕಾರಾಗೃಹದಲ್ಲಿ ಪ್ಲಾಸ್ಟಿಕ್ ಬಾಲ್ ಆಕಾರದ ಬಾಂಬ್‌ನಂಥ ವಸ್ತು ಪತ್ತೆಯಾದ ಸುದ್ದಿ ಇದೆ. ಪ್ಲಾಸ್ಟಿಕ್ ಚೆಂಡಿನಲ್ಲಿದ್ದ ಎರಡು ಪಟಾಕಿಯಂತಹ ವಸ್ತುಗಳನ್ನು ಜೈಲಿನೊಳಗೆ ಎಸೆಯಲಾಗಿದೆ ಎಂದು ಹೇಳಿದ್ದಾರೆ.
ಸ್ಫೋಟಕಕ್ಕೆ ಏನು ಬಳಕೆಯಾಗಿದೆ ಎಂಬುವುದನ್ನು ಕಂಡು ಹಿಡಿಯಲಾಗುತ್ತಿದೆ. ವಿಧಿವಿಜ್ಞಾನ ತಂಡವೂ ತನಿಖೆ ನಡೆಸುತ್ತಿದೆ. ಜೂನ್ 2 ರಂದು ಮಹಾರಾಷ್ಟ್ರದ ಕೊಲ್ಹಾಪುರ ಕೇಂದ್ರ ಕಾರಾಗೃಹದ ಕೈದಿಗಳು ದೊಡ್ಡ ಅಪರಾಧ ಎಸಗಿದ್ದರು.