ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತರು ಸೇರಿಕೊಂಡು ಕಾರು ಡ್ರೈವರ್ ನನ್ನು ಹತ್ಯೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.
ಈ ಘಟನೆ ನಗರದ (Bengaluru) ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ (Bapujinagara) ನಡೆದಿದೆ. ಕೌಶಿಕ್ (25 ) ಕೊಲೆಯಾಗಿರುವ ದುರ್ದೈವಿ. ಮೃತ ಕೌಶಿಕ್ ಬ್ಯಾಟರಾಯನಪುರದಲ್ಲಿ ರೌಡಿಶೀಟರ್ ಆಗಿದ್ದ. ಕೊಲೆ ಪ್ರಕರಣವೊಂದರಲ್ಲಿ ಕೌಶಿಕ್ ಜೈಲು ಸೇರಿದ್ದ. ಇತ್ತೀಚೆಗೆ ಚಾಮೀನು ಪಡೆದು ಕೂಡ ಹೊರ ಬಂದಿದ್ದ. ಜೀವನ ನಡೆಸುವುದಕ್ಕಾಗಿ ಕ್ಯಾಬ್ ಓಡಿಸಿಕೊಂಡಿದ್ದ.
ಭಾನುವಾರ ರಾತ್ರಿ ಸ್ನೇಹಿತರೊಂದಿಗೆ ಕೌಶಿಕ್ ಪಾರ್ಟಿ ಮಾಡಿದ್ದ ಎನ್ನಲಾಗಿದೆ. ಆ ವೇಳೆ ಜಗಳ ನಡೆದಿದ್ದು, ಸ್ನೇಹಿತರು ಸೇರಿಕೊಂಡು ಕೊಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.