ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್‌ಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಗುಡುಗಿದ್ದಾರೆ.
ಕ್ರಿಕೆಟ್ ಆಟದ ಶೈಲಿಯಲ್ಲೇ ಸಿಎಂ ಸಿದ್ದು ವಿರುದ್ಧ ಅಶೋಕ್ ಕೆಂಡಕಾರಿದ್ದಾರೆ. ಅಂದ ದರ್ಬಾರ್ ಸಿಎಂ, ಮಜಾವಾದಿ ಸಿಎಂ ಅಂತೆಲ್ಲ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಆರ್. ಅಶೋಕ್, ಮ್ಯಾಚ್ ಗೆದ್ದಿದ್ದು ಆರ್ ಸಿಬಿ ತಂಡ. ಫೋಟೊ ತೆಗೆಸಿಕೊಂಡಿದ್ದು ಕೆಪಿಸಿಸಿ ತಂಡ ಅಂತಾ ಕಾಲೆಳೆದಿದ್ದಾರೆ. ಸಿಎಂಗೆ ಐದು ವರ್ಷ ಮ್ಯಾನ್ ಆಫ್ ದಿ ಮ್ಯಾಚ್ ಆಗಬೇಕು ಅಂತ ಆಸೆ. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಸಿಎಂ ಸಿದ್ದರಾಮಯ್ಯನ ರನ್ ಔಟ್ ಮಾಡಿಸಬೇಕು ಅಂತಾ ಒಳಗೊಳಗೆ ಆಸೆ ಎಂದು ಅಶೋಕ್ ಸಿಎಂ, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇವರಿಗೆ ಕ್ರಿಕೆಟ್ ಬಗ್ಗೆ ಎಬಿಸಿಡಿ ಸಹ ಗೊತ್ತಿಲ್ಲ. ಎಸಿಬಿ ರಚಿಸಿದ್ದು ಮಾತ್ರ ಗೊತ್ತು. ಅಲ್ಲಿ ಮ್ಯಾಚ್ ಆಡಿದವರು ಆಟಗಾರರು. ಇ;ಲ್ಲಿ ಇವರು ಫ್ಯಾಮಿಲಿ ಫೋಟೊ ತೆಗೆದುಕೊಂಡರು. ಆಟಗಾರರಿಗೆ ಕಪ್ ಸಿಗದಂತೆ ಇವರೇ ಕೈಲಿ ಎತ್ತಿ ಓಡಾಡಿದರು ಎಂದು ವ್ಯಂಗ್ಯವಾಡಿದ್ದಾರೆ.
ಕಾಲುತುಳಿತಕ್ಕೆ ಒಳಗಾದವರ ಎತ್ತಿಕೊಂಡು ಹೋದವರು ಪೊಲೀಸರು. ಡಿಕೆ, ಸಿಎಂ ಅಲ್ಲ. ಆಕ್ಸಿಜನ್ ಕೊಡಿಸಿದ್ದು ಪೊಲೀಸರು. ಡಿಕೆ, ಸಿಎಂ ಅಲ್ಲ. ಆದರೆ ನೀವು ಫೋಟೊ ಕ್ಲಿಕ್ಕಿಸಿಕೊಂಡವರು. ಹೀಗಿದ್ದರೂ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ವಿಷಯದಲ್ಲಿ ನಾವು ನ್ಯಾಯ ಸಿಗುವ ತನಕ ರಾಜಕೀಯ ಮಾಡುತ್ತೇವೆ ಎಂದು ಅಶೋಕ್ ಗುಡುಗಿದ್ದಾರೆ.
ಪೊಲೀಸರನ್ನು ಹರಕೆ ಕುರಿ ಮಾಡಲು ಹೊರಟಿದ್ದೀರಿ. ಅದಕ್ಕಾಗಿ ನಾವು ರಾಜಕೀಯ ಮಾಡಲು ಹೊರಟಿದ್ದೇವೆ. ಕಾಲ್ತುಳಿತದಿಂದ ಸರ್ಕಾರಕ್ಕೆ ಮುಜುಗರ ಆಗಿದೆ. ಹೀಗಾಗಿ ಸಸ್ಪೆಂಡ್ ಅಂತಾ ಆದೇಶದಲ್ಲಿ ಹಾಕಿದ್ದೀರಿ. ಸರ್ಕಾರಕ್ಕೆ ಮುಜುಗರ ಆದರೆ ಪೊಲೀಸರನ್ನು ಯಾಕೆ ಅಮಾನತು ಮಾಡಬೇಕು ಅಂತಾ ಅಶೋಕ್ ಪ್ರಶ್ನಿಸಿದ್ದಾರೆ.
ಪೊಲೀಸರು ಪರ್ಮಿಶನ್ ಕೊಡಲ್ಲ ಎಂದಾಗ ಸಿಎಂ ಮನೆಗೆ ಹೋದವರು ಯಾರು? ಹೋಗ್ರಿ ನಾನು ಇದ್ದೇನೆ. ನೀವು ಕಾರ್ಯಕ್ರಮ ಮಾಡಿ ಅಂತಾ ಹೇಳಿದವರಾರು? ಸರ್ಕಾರ ಕಾನೂನು ಕೈಗೆ ಎತ್ತಿಕೊಂಡಿದೆ. ಕ್ರಿಮಿನಲ್ ಕೇಸ್ ಈ ನಾಯಕರ ಮೇಲೆ ಆಗಬೇಕಿತ್ತು ಎಂದು ಆಗ್ರಹಿಸಿದ್ದಾರೆ.


















