ಬೆಂಗಳೂರು: ಪತ್ನಿಯ ಜೊತೆ ಸಲುಗೆಯಿಂದ ಇದ್ದಾನೆ ಎಂದು ಸಂಶಯಪಟ್ಟು ತನ್ನ ಗೆಳೆಯನನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಘಟನೆ ವರ್ತೂರು (Bengaluru) ಬಳಿಯ ಕೊಡತಿಯಲ್ಲಿ ನಡೆದಿದೆ. ಅನೈತಿಕ ಸಂಬಂಧದ (Illeagal relationship) ಶಂಕೆಯ ಹಿನ್ನೆಲೆಯಲ್ಲಿ ಚಾಕುವಿನಿಂದ (Stabbing) ಇರಿದು ಹತ್ಯೆ (Murder Case) ಮಾಡಿದ್ದಾನೆ. ಚಿತ್ರದುರ್ಗ ಮೂಲದ ಕಿಶೋರ್ ಹತ್ಯೆಯಾಗಿರುವ ವ್ಯಕ್ತಿ. ಕೆಜಿಎಫ್ ಮೂಲದ ಸತೀಶ್ ರೆಡ್ಡಿ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ.
ಕೊಲೆಯಾಗಿರುವ ವ್ಯಕ್ತಿ ಹಾಗೂ ಆರೋಪಿ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಕಿಶೋರ್, ಸಂತೋಷ್ ರೆಡ್ಡಿಯ ಪತ್ನಿಗೆ ಆಪ್ತರಾಗಿದ್ದರು ಮತ್ತು ನಿಯಮಿತವಾಗಿ ಅವರ ಮನೆಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ. ಈ ವೇಳೆ ರೆಡ್ಡಿ ಕಿಶೋರ್‌ನನ್ನು ತನ್ನ ಮನೆಗೆ ಬರದಂತೆ ಎಚ್ಚರಿಸಿದ್ದ. ಆದರೆ, ಇತ್ತೀಚೆಗೆ ಸಂತೋಷ್ ಪತ್ನಿ ಕೊಡತಿಯಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳು ಮತ್ತು ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಕಿಶೋರ್ ಆಕೆಯನ್ನು ನೋಡಲು ನಿಯಮಿತವಾಗಿ ಬರುತ್ತಿದ್ದ. ಮನೆ ಮಾಲೀಕರಿಗೆ ಸಹೋದರ ಎಂದೇ ಪರಿಚಯಿಸಿದ್ದರು ಎನ್ನಲಾಗಿದೆ.
ಸಂತೋಷ್ ರೆಡ್ಡಿ ಹೊಂಚು ಹಾಕಿ ಕುಳಿತು ಕಿಶೋರ್ ಬಂದಾಗ, ಜಗಳವಾಡಿ, ಆತನಿಗೆ ಹಲವು ಬಾರಿ ಇರಿದಿದ್ದಾನೆ. ಆನಂತರ ಅಲ್ಲೇ ಕುಳಿತಿದ್ದಾನೆ. ಆನಂತರ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಸಂತೋಷ್ ಪತ್ನಿ, ಕಿಶೋರ್‌ನನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಲು ಯತ್ನಿಸಿದ್ದರು ಎನ್ನಲಾಗಿದೆ.