ಭಾರತದ ವಿರುದ್ಧ ಹಗೆ ಸಾಧಿಸುತ್ತಿರುವ ಪಾಕಿಸ್ತಾನ ಗಡಿಯಲ್ಲಿ ತನ್ನ ಕ್ಯಾತೆ ಮುಂದುವರಿಸಿದೆ.
ಭಾರತ ಆಪರೇಷನ್ ಸಿಂಧೂರ್ ಪಾರ್ಟ್ 2ಗೆ ಚಾಲನೆ ನೀಡಿದರೂ ಬುದ್ಧಿ ಕಲಿಯದ ಪಾಕ್ ಎಲ್ಒಸಿಯಲ್ಲಿ ಗುಂಡಿನ ದಾಳಿಯನ್ನು ಮುಂದುವರಿಸಿದೆ.
ಈ ಬಾರಿ ಗಡಿಯಲ್ಲಿ ಡ್ರೋನ್ ದಾಳಿ ಮಾಡಲು ಪಾಕ್ ಮುಂದಾಗಿದೆ. ಜಮ್ಮು-ಕಾಶ್ಮೀರದ ಉಧಮ್ ಪುರ್, ಸಾಂಬಾ, ಜಮ್ಮು, ಅಖ್ನೋರ್, ನಗ್ರೋಟ, ಪಠಾಣ್ ಕೋಟ್ ಗಳ ಮೇಲೆ ಡ್ರೋನ್ ದಾಳಿಗೆ ಮುಂದಾಗಿತ್ತು.
ಆದ್ರೆ ಭಾರತದ ಏರ್ ಡಿಫೆನ್ಸ್ ಸಿಸ್ಟಂ ಪಾಕಿಗಳ ಈ ದುಸ್ಸಾಹಸವನ್ನು ಆಗಸದಲ್ಲೇ ಚಿಂದಿ ಉಡಾಯಿದೆ. ಒಂದಲ್ಲಾ, ಎರಡಲ್ಲಾ ಚೀನಾ ನಿರ್ಮಿತ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ಗಳನ್ನು ಭಾರತೀಯ ಸೇನೆ ಧರೆಗುರುಳಿಸಿದೆ.