ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಂಡ ರಣಜಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. ರೈಲ್ವೇಸ್(Delhi vs Railways) ವಿರುದ್ಧದ ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ(Virat Kohli) ಪಾದಕ್ಕೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದೆ. .
12 ವರ್ಷಗಳ ಬಳಿಕ ರಣಜಿ ಆಡುತ್ತಿರುವ ವಿರಾಟ್ ಕೊಹ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ ಅಭಿಮಾನಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಕರೆದೊಯ್ದರು. ಆತನಿಗೆ ಏನೂ ಮಾಡದಂತೆ ಕೊಹ್ಲಿ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿಕೊಂಡರು.
ಡೆಲ್ಲಿ ತಂಡ ಔಟ್
‘ಡಿ’ ಗುಂಪಿನಲ್ಲಿರುವ ದೆಹಲಿ ತಂಡ ಕ್ವಾರ್ಟರ್ ಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದರೂ, ಕೊಹ್ಲಿ ಆಡಲಿದ್ದಾರೆ ಎನ್ನುವ ಕಾರಣಕ್ಕೆ ಈ ಪಂದ್ಯದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಕೊಹ್ಲಿ ಆಡುವ ಕಾರಣದಿಂದಲೇ ದಿಲ್ಲಿ ಕ್ರಿಕೆಟ್ ಸಂಸ್ಥೆ 10 ಸಾವಿರ ಉಚಿತ ಟಿಕೆಟ್ ಹಂಚಿದೆ. ಪಂದ್ಯಕ್ಕೆ ಹೆಚ್ಚಿನ ಪೊಲೀಸ್ (police)ಭದ್ರತೆ ನೀಡಿದೆ. ತಾವೊಬ್ಬ ‘ಸೂಪರ್ ಸ್ಟಾರ್’ ಎನ್ನುವ ಹಮ್ಮುಬಿಮ್ಮಿಲ್ಲದೆ ಎಲ್ಲರೊಂದಿಗೂ ಬೆರೆತು ಕೊಹ್ಲಿ ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಜತೆಗೆ ಯುವ ಆಟಗಾರರಿಗೆ ಕೆಲ ಸಲಹೆಯನ್ನು ನೀಡಿದ್ದಾರೆ.
ತಂಡಗಳು
ದೆಹಲಿ: ಅರ್ಪಿತ್ ರಾಣಾ, ಸನತ್ ಸಾಂಗ್ವಾನ್, ವಿರಾಟ್ ಕೊಹ್ಲಿ, ಯಶ್ ಧುಲ್, ಆಯುಷ್ ಬದೋನಿ (ನಾಯಕ), ಪ್ರಣವ್ ರಾಜುವಂಶಿ (ವೀ.ಕಿ), ಸುಮಿತ್ ಮಾಥುರ್, ಶಿವಂ ಶರ್ಮಾ, ನವದೀಪ್ ಸೈನಿ, ಮನಿ ಗ್ರೆವಾಲ್, ಸಿದ್ಧಾಂತ್ ಶರ್ಮಾ.
ರೈಲ್ವೇಸ್: ಅಂಚಿತ್ ಯಾದವ್, ವಿವೇಕ್ ಸಿಂಗ್, ಸೂರಜ್ ಅಹುಜಾ (ನಾಯಕ), ಉಪೇಂದ್ರ ಯಾದವ್ (ವೀ.ಕಿ), ಮೊಹಮ್ಮದ್ ಸೈಫ್, ಭಾರ್ಗವ್ ಮೆರೈ, ಕರ್ಣ್ ಶರ್ಮಾ, ರಾಹುಲ್ ಶರ್ಮಾ, ಹಿಮಾಂಶು ಸಾಂಗ್ವಾನ್, ಅಯಾನ್ ಚೌಧರಿ, ಕುನಾಲ್ ಯಾದವ್