deer
ಮೈಸೂರು : ಜಿಲ್ಲೆಯಲ್ಲಿನ ಕಬಿನಿ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ನಲ್ಲಿ ಅಪರೂಪದ ದೃಶ್ಯವೊಂದು ಸೆರೆಯಾಗಿದೆ. ಹುಲಿ ಬೇಟೆಗೆ ಜಿಂಕೆ ಬಲಿಯಾಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕಬಿನಿ ಅರಣ್ಯ ಪ್ರದೇಶದಲ್ಲಿ ಜಿಂಕೆಯ ಗುಂಪು ಕಂಡ ವ್ಯಾಘ್ರವೊಂದು ದಾಳಿ ನಡೆಸಿ, ಜಿಂಕೆ ಬೇಟೆಯಾಡಿ ಹೊತ್ತುಕೊಂಡು ಹೋಗುವ ವಿಡಿಯೋ ಸೆರೆಯಾಗಿದೆ. ಹುಲಿಬೇಟೆಯಾಡುವ ದೃಶ್ಯ ಸಿಗುವುದು ಅಪರೂಪದಲ್ಲಿ ಅಪರೂಪವಾಗಿದ್ದು, ಪ್ರವಾಸಿಗರು ಅದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.