ಭಾರತವು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವ ಹಾದಿಯನ್ನು ಕಠಿಣಗೊಳಿಸಿಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಸೋಲೊಪ್ಪಿಕೊಂಡಿದ್ದ ಭಾರತ ತಂಡ, ಪುಣೆ, ಮುಂಬಯಿ ಟೆಸ್ಟ್ ಪಂದ್ಯಗಳಲ್ಲೂ ಸೋಲು ಕಂಡಿದೆ. ಈ ಮೂರು ಸೋಲುಗಳೊಂದಿಗೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಲೆಕ್ಕಾಚಾರ ಪಲ್ಟಿ ಹೊಡೆಯುತ್ತಿದೆ.
ಒಂದು ವೇಳೆ ಭಾರತ ತಂಡ ಈ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆದ್ದಿದ್ದರೆ, ಭಾರತ ತಂಡ ನೇರವಾಗಿ ಪೈನಲ್ ಪ್ರವೇಶ ಮಾಡುತ್ತಿತ್ತು. ಭಾರತ ತಂಡವು ಮೂರು ಪಂದ್ಯಗಳಲ್ಲೂ ಸೋಲುಂಡು WTC ಪಾಯಿಂಟ್ಸ್ ಟೇಬಲ್ನಲ್ಲಿ 15.91 ಪರ್ಸಂಟೇಜ್ ಅಂಕಗಳನ್ನು ಕಳೆದುಕೊಂಡಿದೆ. ಹೀಗಾಗಿ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.
ಆದರೆ, ಸೋಲು ಕಂಡರೂ ಇನ್ನೂ ಫೈನಲ್ ರೇಸ್ ನಿಂದ ಹೊರ ಬಿದ್ದಿಲ್ಲ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟೂರ್ನಿಯಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದರೆ ನೇರವಾಗಿ ಫೈನಲ್ ಪ್ರವೇಶ ಮಾಡಬಹುದು.
ಒಂದು ವೇಳೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 1 ಅಥವಾ 2 ಪಂದ್ಯಗಳಲ್ಲಿ ಸೋಲನುಭವಿಸಿದರೆ, ಫೈನಲ್ ಪ್ರವೇಶಕ್ಕೆ ಉಳಿದ ತಂಡಗಳ ಫಲಿತಾಂಶ ಮುಖ್ಯವಾಗಿರುತ್ತದೆ. ಸದ್ಯ ಅಂಕ ಪಟ್ಟಿಯಲ್ಲಿ ಭಾರತದ ನಂತರದ ಸ್ಥಾನದಲ್ಲಿ ಅಂದರೆ, ಮೂರನೇ ಸ್ಥಾನದಲ್ಲಿ ಶ್ರೀಲಂಕಾ (55.56%), ನ್ಯೂಜಿಲೆಂಡ್ (54.550%) ಮತ್ತು ಸೌತ್ ಆಫ್ರಿಕಾ (54.17%) ತಂಡಗಳು ಇವೆ. ಹೀಗಾಗಿ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಹುಮುಖ್ಯವಾಗಿದೆ.