ಮಂಡ್ಯ: ರೋಡ್ ಹಂಪ್ ಗೆ ಕಾಂಗ್ರೆಸ್ ಮುಖಂಡರೊಬ್ಬರ ಮಗ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ನಗರದ ವಿಸಿ ಫಾರಂ ಗೇಟ್ ಹತ್ತಿರ ನಡೆದಿದೆ. ಈ ಘಟನೆಯಲ್ಲಿ ದ್ಯಾಪಸಂದ್ರ ಗ್ರಾಮದ ಕಾಂಗ್ರೆಸ್ ಮುಖಂಡ ಶಂಕರಲಿಂಗೇಗೌಡ ಎಂಬುವವರ ಮಗ ಗಂಭೀರವಾಗಿ ಗಾಯಗೊಂಡಿದ್ದ. ಆದರೆ, ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಘಟನೆಯ ನಂತರ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ, ರಸ್ತೆಗೆ ಹಾಕಿದ್ದ ಹಂಪ್ ತೆರವುಗೊಳಿಸಿದ್ದಾರೆ. ಒಂದು ವಾರದ ಹಿಂದೆ ಹೆದ್ದಾರಿ ಪ್ರಾಧಿಕಾರ ಈ ರೋಡ್ ಹಂಪ್ ನಿರ್ಮಿಸಿದ್ದರು. ಸ್ಥಳೀಯರ ಮನವಿ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ರಸ್ತೆ ಹಂಪ್ ನಿರ್ಮಾಣ ಮಾಡಿದ್ದರು. ಆದರೆ, ಅವೈಜ್ಞಾನಿಕ ಹಂಪ್ ಗೆ ಈಗ ಯುವಕ ಬಲಿಯಾಗಿದ್ದಾನೆ.
ಅಧಿಕಾರಿಗಳ ನಿರ್ಲಕ್ಷ್ಯದ ಅವೈಜ್ಞಾನಿಕ ಹಂಪ್ಸ್ ಗಳಿಗೆ 15ಕ್ಕೂ ಹೆಚ್ಚು ಅಪಘಾತಗಳು ನಡೆದಿವೆ. ಈ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯುವಕ ಬಲಿಯಾಗಿದ್ದಾನೆ. ಹಂಪ್ಸ್ ಬಗ್ಗೆ ಸಾಕಷ್ಟು ದೂರುಗಳು ಬಂದರೂ ಅಧಿಕಾರಿಗಳು ನಿರ್ಲಕ್ಷ್ಯತೋರಿದ್ದಾರೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.