ಗಂಗಾವತಿ: ಶಾಲಾ ಮಕ್ಕಳಿದ್ದ ಬಸ್ ಪಲ್ಟಿಯಾದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಹಂಪಿ ಪ್ರವಾಸಕ್ಕೆ ತೆರಳಿದ್ದ ಕಲಬುರಗಿಯ ಗುರುಮಿಟ್ಕಲ್‌ನ ಶಾಲಾ ಮಕ್ಕಳಿದ್ದ ಸಾರಿಗೆ ಬಸ್ ಗಂಗಾವತಿಯ ಮರಳಿ ಹತ್ತಿರ ಪಲ್ಟಿಯಾಗಿ ಪಕ್ಕದ ಹೊಲಕ್ಕೆ ಉರುಳಿದೆ.
ಇಂದು ಬೆಳಗ್ಗೆ 4:30ರ ವೇಳೆಗೆ ಈ ಘಟನೆ ನಡೆದಿದೆ. ಆದರೆ, ಅದೃಷ್ಟವಶಾತ್ ಬಸ್ ನಲ್ಲಿದ್ದ 60 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ, ಓರ್ವ ವಿದ್ಯಾರ್ಥಿಗೆ ಸಣ್ಣ ಪ್ರಮಾಣದ ಗಾಯಗಾವಿಗೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಸಾರಿಗೆ ಇಲಾಖೆಯ ಗಂಗಾವತಿ ಘಟಕದ ವ್ಯವಸ್ಥಾಪಕ ರಾಜಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಗೆ ಪರ್ಯಾಯ ವಾಹನದ ವ್ಯವಸ್ಥೆ ಮಾಡಿದ್ದಾರೆ. ಬುಧವಾರ ರಾತ್ರಿ ಎಲ್ಲರೂ ಪ್ರವಾಸಕ್ಕೆಂದು ಹೊರಟಿದ್ದರು. ಬೆಳಗ್ಗೆ ಮರಳಿ ಹತ್ತಿರ ಪೇಪರ್ ಸಾಗಿಸುವ ವಾಹನ ಎದುರು ಬಂದಿದೆ. ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಬಸ್ ಅಪಘಾತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.