ದೇವನಹಳ್ಳಿ: ಅಪ್ರಾಪ್ತೆ ಯುವತಿಯನ್ನು ಮದುವೆಯಾಗಿದ್ದಕ್ಕೆ ಹುಡುಗನ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ.
ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಅಪ್ರಾಪ್ತ ಯುವತಿಯನ್ನು ಪ್ರೀತಿಸಿ, ಓಡಿ ಹೋಗಿ ಮದುವೆಯಾಗಿದ್ದಾರೆ. ಇದರಿಂದ ಕೋಪಗೊಂಡ ಯುವತಿಯ ಮನೆಯವರು, ಹುಡುಗನ ಮನೆಗೆ ನುಗ್ಗಿ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಿ ನಂತರ ಯುವಕನನ್ನೂ ಪತ್ತೆ ಮಾಡಿ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿದ್ದಾರೆ. ಈಗ ಯುವಕ, ಪತ್ನಿಗಾಗಿ ಕಣ್ಣೀರು ಸುರಿಸುತ್ತಿದ್ದಾನೆ.
ಗುರುಕಿರಣ್ ಎಂಬ ಯುವಕನ ಕುಟುಂಬಸ್ಥರೇ ಈಗ ಹಲ್ಲೆಗೆ ಒಳಗಾಗಿದ್ದಾರೆ. ದೇವನಹಳ್ಳಿ ತಾಲೂಕಿನ ಕೆಂಪತಿಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಈತನಿಗೆ ಅಪ್ರಾಪ್ತೆ ಜೊತೆ ಪ್ರೇಮಾಂಕುರವಾಗಿದ್ದು ಮದುವೆ ಮಾಡಿಕೊಂಡಿದ್ದಾನೆ. ಮನೆಯವರ ವಿರೋಧದ ನಡುವೆ ನಾಲ್ಕು ದಿನಗಳಿಂದೆ ಅಪ್ರಾಪ್ತೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ.
ಇದರಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು ಗುಂಪು ಕಟ್ಟಿಕೊಂಡು ಬಂದು ಯುವಕನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ ಹುಡುಗನ ತಂದೆ, ತಾಯಿ ಹಾಗೂ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಮನೆಗೆ ನುಗ್ಗಿ ಹಲ್ಲೆ ಮಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆನಂತರ ಕಾರಿನಲ್ಲಿ ಎಳೆದೊಯ್ದು ಹುಡುಗ ಎಲ್ಲಿದ್ದಾನೆ ಎಂಬುವುದು ತೋರಿಸುವಂತೆ ಹಿಂಸೆ ನೀಡಿದ್ದಾನೆ. ಆನಂತರ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿದ್ದಾರೆ.
ನಂತರ ಯುವಕನನ್ನು ಹಾಗೂ ತಂದೆಯನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗ ನ್ಯಾಯಕ್ಕಾಗಿ ಯುವಕನ ಮನೆಯವರು ಅಂಗಲಾಚುತ್ತಿದ್ದಾರೆ. ಈ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.