ಇಸ್ರೇಲ್ ಹಾಗೂ ಲೆಬನಾನ್ ಮಧ್ಯೆ ಸಂಘರ್ಷ ವಿಕೋಪದ ಹಾದಿ ಹಿಡಿಯುತ್ತಿದೆ. ಹೀಗಾಗಿ ಹಲವು ರಾಷ್ಟ್ರಗಳು ತಮ್ಮ ನಾಗರಿಕರಿಗೆ ಮರಳಿ ಬರುವಂತೆ ಸೂಚಿಸಿವೆ.
ಆಸ್ಪ್ರೇಲಿಯಾ ಈಗಾಗಲೇ ತಮ್ಮ ನಾಗರಿಕರಿಗೆ ಲೆಬನಾನ್ ತೊರೆಯುವಂತೆ ಸೂಚಿಸಿದರೆ, ಬ್ರಿಟನ್ ಕೂಡ ಅದೇ ಹಾದಿ ಹಿಡಿದಿದೆ. ಈ ಮಧ್ಯೆ ಭಾರತೀಯ ರಾಯಭಾರ ಕಚೇರಿ ಕೂಡ ಕೂಡಲೇ ಲೆಬನಾನ್ ಬಿಡುವಂತೆ ಪ್ರಜೆಗಳಿಗೆ ಕರೆ ನೀಡಿದೆ. ಭಾರತೀಯ ರಾಯಭಾರ ಕಚೇರಿಯೂ ಅಲ್ಲಿನ ಭಾರತೀಯರಿಗೆ ದೇಶಕ್ಕೆ ಮರಳುವಂತೆ ಸೂಚಿಸಿದೆ. ಬ್ರಿಟನ್ ಕೂಡ ಎಚ್ಚರಿಕೆಯ ಕ್ರಮ ಕೈಗೊಂಡಿದೆ.
ಆಸ್ಪ್ರೇಲಿಯಾದ ವಿದೇಶಾಂಗ ಇಲಾಖೆ ಮಾಹಿತಿಯಂತೆ ಸುಮಾರು 15 ಸಾವಿರ ಆಸ್ಟ್ರೇಲಿಯನ್ನರು ಬೆಬನಾನ್ ನಲ್ಲಿದ್ದಾರೆ. ಬೈರೂತ್ ವಿಮಾನ ನಿಲ್ದಾಣ ದೀರ್ಘಾವಧಿವರೆಗೆ ಮುಚ್ಚುವ ಸಾಧ್ಯತೆ ಇದೆ. ಹೀಗಾಗಿ ಆಸ್ಪ್ರೇಲಿಯನ್ನರು ಕೂಡಲೇ ಹೊರಡಬೇಕು ಎಂದು ಒತ್ತಾಯಿಸಿದ್ದಾರೆ.
ಬ್ರಿಟನ್ ವಿದೇಶಾಂಗ ಸಚಿವರನ್ನು ಭೇಟಿಯಾಗಿರುವ ಪೆನ್ನಿವಾಂಗ್, ಕದನ ವಿರಾಮದ ಬಗ್ಗೆ ಚರ್ಚಿಸಿದ್ದಾರೆ. 2006ರಲ್ಲಿ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಸಂಘರ್ಷ ಉಂಟಾದಾಗ, ಸಿರಿಯಾ, ಜೋರ್ಡನ್, ಸಿಪ್ರಸ್ ಮತ್ತು ಟರ್ಕಿ ಸಹಕಾರದೊಂದಿಗೆ ಆಸ್ಪ್ರೇಲಿಯಾ ಐದು ಸಾವಿರ ನಾಗರಿಕರನ್ನು ಹಾಗೂ 1,200 ವಿದೇಶಿಯರನ್ನು ಲೆಬನಾನ್ ನಿಂದ ಸ್ಥಳಾಂತರಿಸಿತ್ತು.
ಭಾರತೀಯ ರಾಯಭಾರ ಕಚೇರಿ, ಲೆಬನಾನ್ ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಸಲಹೆ ನೀಡಿದೆ. ಅಲ್ಲದೇ ಕಾರಣಾಂತರಗಳಿಂದ ಲೆಬನಾನ್ ನಲ್ಲೇ ಉಳಿದ ಜನ ಎಚ್ಚರಿಕೆಯಿಂದ ಇರುವಂತೆ ಹಾಗೂ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದೆ.