ಯೋಧರು ತೆರಳುತ್ತಿದ್ದ ಬಸ್ ಅಪಘಾತವಾಗಿದ್ದು, ಮೂವರು ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ.
ಜಮ್ಮು ಕಾಶ್ಮೀರದಲ್ಲಿ ಪುಲ್ವಾಮಾದಿಂದ ಬದ್ಗಾಮ್ ಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.
ಅಲ್ಲದೇ, ಈ ಘಟನೆಯಲ್ಲಿ 28 ಜನ ಯೋಧರು ಗಾಯಗೊಂಡಿದ್ದಾರೆ. ಈ ವಾಹನದಲ್ಲಿದ್ದ ಯೋಧರನ್ನು ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ 2ನೇ ಹಂತದ ಚುನಾವಣೆಗೆ ನಿಯೋಜಿಸಲಾಗಿತ್ತು. ಈ ವೇಳೆ ತೆರಳುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ. ಗಾಯಾಳುಗಳ ನೆರವಿಗೆ ತಕ್ಷಣದ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಬಸ್ಸಿನಲ್ಲಿ ಸುಮಾರು 35 ಯೋಧರಿದ್ದರು ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.