ಭಾಗಲ್ಪುರ: ರಾಹುಲ್ ಗಾಂಧಿ ನಂ. 1 ಭಯೋತ್ಪಾದಕ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಾಲಿಗೆ ಹರಿ ಬಿಟ್ಟಿದ್ದಾರೆ.
ಬಿಹಾರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ರಾಹುಲ್ ಗೆ ಬಾಂಬ್ ತಯಾರಿಸುವವರು ಬೆಂಬಲ ನೀಡುತ್ತಿದ್ದಾರೆ. ದೇಶವನ್ನು ವಿಭಜಿಸುವ ಮಾತನಾಡುವ ಪ್ರತ್ಯೇಕತಾವಾದಿಗಳಿಂದ ರಾಹುಲ್ ಬೆಂಬಲ ಪಡೆದಿದ್ದಾರೆ. ಮೋಸ್ಟ್ ವಾಂಟೆಡ್ ವ್ಯಕ್ತಿಗಳು ಸಹ ಸಿಖ್ಖರ ವಿರುದ್ಧ ಮಾಡಿದ ಹೇಳಿಕೆಗಳಿಗಾಗಿ ರಾಹುಲ್ ಗಾಂಧಿಯನ್ನು ಶ್ಲಾಘಿಸುತ್ತಿದ್ದಾರೆ. ರಾಹುಲ್ ಇತ್ತೀಚೆಗೆ ಪ್ರತ್ಯೇಕತಾವಾದಿಯಂತೆ ಮಾತನಾಡುತ್ತಿದ್ದಾರೆ. ರಾಹುಲ್ ದೇಶದ ಬಹುದೊಡ್ಡ ಶತ್ರು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಬೇರೆ ದೇಶವನ್ನು ಪ್ರೀತಿಸಿದಷ್ಟು ತನ್ನ ದೇಶವನ್ನು ಪ್ರೀತಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ವಿದೇಶಕ್ಕೆ ಹೋಗಿ ಭಾರತದ ಬಗ್ಗೆ ನಕಾರಾತ್ಮಕ ಮಾತುಗಳನ್ನು ಆಡುತ್ತಾರೆ. ಅವರು ಹಿಂದೂಸ್ಥಾನಿ ಅಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಈ ಹಿಂದೆ ಮುಸ್ಲಿಮರನ್ನು ಬಳಸಲು ಪ್ರಯತ್ನಿಸಿತ್ತು, ಆದರೆ ಅದು ಸಾಧ್ಯವಾಗದ ಕಾರಣ, ಅದು ಈಗ ಸಿಖ್ಖರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.