ಬೆಂಗಳೂರು: ಪ್ರೊ. ಕಬಡ್ಡಿ ಲೀಗ್ ನ 11ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಅಕ್ಟೋಬರ್ 18ರಿಂದ ಲೀಗ್ ಆರಂಭವಾಗಲಿದೆ. ಹೈದರಾಬಾದ್ ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಪೈಪೋಟಿ ನಡೆಸಲಿವೆ.
ಸ್ಟಾರ್ ಆಟಗಾರರಾದ ಪ್ರದಿಪ್ ನರ್ವಾಲ್ (ಬುಲ್ಸ್) ಮತ್ತು ಪವನ್ ಸೆಹ್ರಾವತ್ (ಟೈಟಾನ್ಸ್) ಮೊದಲ ಪಂದ್ಯದಲ್ಲೇ ಮುಖಾಮುಖಿ ಆಗಲಿದ್ದಾರೆ. 2ನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಮತ್ತು ಯು ಮುಂಬಾ ತಂಡಗಳು ಸೆಡ್ಡು ಹೊಡೆಯಲಿವೆ.
ಈ ಬಾರಿ ಲೀಗ್ ಹಂತದ ಪಂದ್ಯಗಳು ಕೇವಲ 3 ನಗರಗಳಲ್ಲಿ ಮಾತ್ರ ನಡೆಯಲಿವೆ. ಹೈದರಾಬಾದ್ ನ ಗಚ್ಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ನವೆಂಬರ್ 9ರ ವರೆಗೆ ಟೂರ್ನಿಯ ಮೊದಲ ಚರಣದ ಪಂದ್ಯಗಳು ನಡೆಯಲಿವೆ. ಆನಂತರ ನವೆಂಬರ್ 10ರಿಂದ ಡಿಸೆಂಬರ್ 1ರ ವರೆಗೆ 2ನೇ ಚರಣದ ಪಂದ್ಯಗಳು ನೋಯ್ಡಾದಲ್ಲಿ ನಡೆಯಲಿವೆ.
3ನೇ ಚರಣದ ಪಂದ್ಯಗಳು ಡಿಸೆಂಬರ್ 3ರಿಂದ 24ರ ವರೆಗೆ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ 3ನೇ ಚರಣದ ಪಂದ್ಯಗಳು ನಡೆಯಲಿವೆ. ಫೈನಲ್ ನೊಂದಿಗೆ ಪ್ಲೇ ಆಫ್ ಹಂತದ ಪಂದ್ಯಗಳ ಸ್ಥಳ ಮತ್ತು ದಿನಾಂಕವನ್ನು ತಡವಾಗಿ ಪ್ರಕಟಿಸಲಾಗುವುದು ಎಂದು ಟೂರ್ನಿಯ ಸಂಟಕ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ಹೇಳಿದೆ.
ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಆಟಗಾರರು ಕೋಟಿಯ ಮುಖಬೆಲೆಯಲ್ಲಿ ಖರೀದಿಯಾಗಿದ್ದಾರೆ. ರೈಡರ್ ಸಚಿನ್ 2.15 ಕೋಟಿ ರೂ.ಗೆ ತಮಿಳ್ ತಲೈವಾಸ್ ಪಾಲಾಗಿದ್ದರು. ಲೀಗ್ ಹಂತದಲ್ಲಿ ಪ್ರತಿದಿನ 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ರಾತ್ರಿ 8 ಮತ್ತು 2ನೇ ಪಂದ್ಯ ರಾತ್ರಿ 9ಕ್ಕೆ ಶುರುವಾಗಲಿದೆ. 12 ತಂಡಗಳು ಲೀಗ್ ಹಂತದಲ್ಲಿ ಪರಸ್ಪರ 2 ಬಾರಿ ಮುಖಾಮುಖಿ ಆಗಲಿವೆ. ಲೀಗ್ ನ ಪ್ರತಿಯೊಂದು ತಂಡ ತಲಾ 22 ಲೀಗ್ ಪಂದ್ಯಗಳನ್ನು ಆಡಲಿವೆ.
ಬೆಂಗಳೂರು ಬುಲ್ಸ್ ತಂಡವು ಯಾವ ದಿನ, ಯಾವ ತಂಡವನ್ನು ಯಾವ ಸಮಯಕ್ಕೆ ಎದುರಿಸಲಿದೆ?
ಅ.18 ತೆಲುಗು ಟೈಟಾನ್ಸ್ ರಾತ್ರಿ 8
ಅ.20 ಗುಜರಾತ್ ಜೈಂಟ್ಸ್ ರಾತ್ರಿ 9
ಅ. 22 ಯುಪಿ ಯೋಧಾಸ್ ರಾತ್ರಿ 9
ಅ. 25 ಪುಣೇರಿ ಪಲ್ಟಾನ್ ರಾತ್ರಿ 9
ಅ. 29 ದಬಾಂಗ್ ದೆಹಲಿ ರಾತ್ರಿ 9
ನ. 2 ತೆಲುಗು ಟೈಟಾನ್ಸ್ ರಾತ್ರಿ 8
ನ. 4 ತಮಿಳ್ ತಲೈವಾಸ್ ರಾತ್ರಿ 8
ನ. 9 ಬೆಂಗಾಲ್ ವಾರಿಯರ್ಸ್ ರಾತ್ರಿ 9
ನ. 12 ಜೈಪುರ ಪಿಂಕ್ಪ್ಯಾಂಥರ್ಸ್ ರಾತ್ರಿ 8
ನ. 16 ದಬಾಂಗ್ ದೆಹಲಿ ರಾತ್ರಿ 9
ನ. 18 ಯು ಮುಂಬಾ ರಾತ್ರಿ 8
ನ. 19 ಪಟನಾ ಪೈರೇಟ್ಸ್ ರಾತ್ರಿ 9
ನ. 21 ಹರಿಯಾಣ ಸ್ಟೀಲರ್ಸ್ ರಾತ್ರಿ 8
ನ. 25 ಯು ಮುಂಬಾ ರಾತ್ರಿ 8
ನ. 30 ಪಟನಾ ಪೈರೇಟ್ಸ್ ರಾತ್ರಿ 8
ಡಿ. 3 ಗುಜರಾತ್ ಜೈಂಟ್ಸ್ ರಾತ್ರಿ 8
ಡಿ. 10 ಬೆಂಗಾಲ್ ವಾರಿಯರ್ಸ್ ರಾತ್ರಿ 9
ಡಿ. 11 ಹರಿಯಾಣ ಸ್ಟೀಲರ್ಸ್ ರಾತ್ರಿ 8
ಡಿ. 13 ಪುಣೇರಿ ಪಲ್ಟಾನ್ ರಾತ್ರಿ 9
ಡಿ. 17 ಜೈಪುರ ಪಿಂಕ್ಪ್ಯಾಂಥರ್ಸ್ ರಾತ್ರಿ 9
ಡಿ. 22 ತಮಿಳ್ ತಲೈವಾಸ್ ರಾತ್ರಿ 8
ಡಿ. 24 ಯುಪಿ ಯೋಧಾಸ್ ರಾತ್ರಿ 8