ಸ್ಪೇಸ್ ಎಕ್ಸ್ ಸಂಸ್ಥೆ ತನ್ನ ಸ್ಟಾರ್ ಶಿಪ್ ರಾಕೆಟ್ ಗಳ ಪರೀಕ್ಷೆ ನಡೆಸುತ್ತಿದೆ. ಹೀಗೆ ರಾಕೆಟ್ ಗಳ ಸಂಶೋಧನೆ ಅಥವಾ ಪರೀಕ್ಷೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ರಾಕೆಟ್ ಭೂಮಿಯ ಹೊರ ವಾಯು ಮಂಡಲದಲ್ಲಿ ಸ್ಫೋಟಗೊಂಡಿದ್ದು, ಈ ಸ್ಫೋಟದ ತೀವ್ರತೆಗೆ ಭೂಮಿಯಿಂದ ಅತ್ಯಂತ ಮೇಲ್ಭಾಗದ ಬಾಹ್ಯ ವಾಯು ಮಂಡಲದಲ್ಲಿ (ಅಯಾನುಗೋಳ) ದೊಡ್ಡ ರಂಧ್ರ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ.
ರಷ್ಯಾ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದಾರೆ. ಮೊದಲ ಬಾರಿಗೆ ಮಾನವ ನಿರ್ಮಿತ ಸ್ಫೋಟವೊಂದು ಭೂಮಿಯ ಬಾಹ್ಯ ವಾಯುಮಂಡಲಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಈ ಸಂಶೋಧನಾ ವರದಿ ಹೇಳಿದೆ. 2023ರ ನವೆಂಬರ್ 18 ರಂದು ಈ ಸ್ಫೋಟ ಸಂಭವಿಸಿತ್ತು. ಆದರೆ, ಈ ರಾಕೆಟ್ ನ್ನು ಇಲ್ಲಿಯವರೆಗಿನ ಅತಿ ದೊಡ್ಡ ಹಾಗೂ ಶಕ್ತಿಯುತ ರಾಕೆಟ್ ಎಂದು ಸಂಸ್ಥೆ ಹೇಳಿಕೊಂಡಿತ್ತು. ಆದರೆ ಈ ರಾಕೆಟ್ ಉಡಾವಣೆಯಾದ ಕೇವಲ 4 ನಿಮಿಷದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗಿತ್ತು.
ಈ ರಾಕೆಟ್‌ನ ಮೊದಲ ಹಂತ ಎಂಜಿನ್ ಬೇರ್ಪಟ್ಟ ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡಿತು. ಹೀಗಾಗಿ, ರಾಕೆಟ್ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗುವಂತೆ ಮಾಡಲಾಗಿದ್ದ ವಿಜ್ಞಾನಿಗಳ ತಂತ್ರಗಾರಿಕೆ ಕೈಕೊಟ್ಟಿತ್ತು. ನಾಲ್ಕನೇ ನಿಮಿಷದಲ್ಲಿ ರಾಕೆಟ್ ನ ಇನ್ನುಳಿದ ಭಾಗ ಕೂಡಾ ಸ್ಫೋಟಗೊಂಡಿತು. ಈ ಸ್ಫೋಟ ಭೂಮಿಯಿಂದ 95 ಮೈಲು ಎತ್ತರ (150 ಕಿ. ಮೀ.) ದಲ್ಲಿ ಸಂಭವಿಸಿತ್ತು. ಈ ರಾಕೆಟ್‌ನಲ್ಲಿ ದ್ರವ ರೂಪದ ಆಮ್ಲಜನಕ ಕೂಡಾ ಇತ್ತು. ಈ ಆಮ್ಲಜನಕದಿಂದಾಗಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಕುರಿತು ಹಿಂದೆ ಎಕ್ಸ್ ಸಿಇಒ ಎಲಾನ್ ಮಸ್ಕ್ ಕೂಡಾ ಈ ಕುರಿತಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.
ಈ ಸ್ಫೋಟದಿಂದ ಭೂಮಿಯ ಬಾಹ್ಯ ವಾಯು ಮಂಡಲವಾದ ಅಯಾನುಗೋಳದಲ್ಲಿ ದೊಡ್ಡ ರಂಧ್ರ ಏರ್ಪಟ್ಟಿದೆ ಎಂದು ಆಗಸ್ಟ್ 26 ರಂದು ಪ್ರಕಟವಾದ ಜರ್ನಲ್ ಜಿಯೋಫಿಸಿಕಲ್ ರಿಸರ್ಚ್ ಲೆಟರ್‌ನಲ್ಲಿ ಸಮಗ್ರವಾಗಿ ವಿವರಿಸಲಾಗಿದೆ. ಭೂಮಿಯಿಂದ ಸ್ವಲ್ಪ ದೂರದಲ್ಲಿ ಅಯಾನುಗೋಳವಿದೆ. ಇದು ಸುಮಾರು ಭೂಮಿಯಿಂದ 80 ರಿಂದ 650 ಕಿ. ಮೀ. ದೂರ ವಿಸ್ತಾರವಾಗಿದೆ. ಭೂಮಿಯ ಈ ಬಾಹ್ಯ ವಾಯು ಮಂಡಲದಲ್ಲಿ ಅನಿಗಳು ಅಯಾನೀಕರಣಗೊಳ್ಳುತ್ತವೆ. ಎಲೆಕ್ಟ್ರಾನ್‌ಗಳು ಚೆದುರಿ ಪ್ಲಾಸ್ಮಾ ನಿರ್ಮಾಣವಾಗುತ್ತದೆ. ಹೀಗಾಗಿ ಇದನ್ನು ವಿಜ್ಞಾನ ಲೋಕ ಸೂಕ್ಷ್ಮ ಎಂದು ಕರೆಯುತ್ತದೆ.
ರಾಕೆಟ್ ನ ಎಂಜಿನ್ ನಲ್ಲಿ ಬಳಕೆ ಮಾಡಲಾಗಿದ್ದ ಇಂಧನಗಳು ಸ್ಫೋಟಗೊಂಡ ಪರಿಣಾಮ, ಅಯಾನುಗೋಳದಲ್ಲಿ ಇರುವ ಅನಿಲಗೊಳ ಜೊತೆಗೆ ಬೆರೆಯುತ್ತವೆ. ಹೀಗಾಗಿ ರಂಧ್ರ ನಿರ್ಮಾಣ ಆಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ರಂಧ್ರದಿಂದ ಭೂಮಿಯಲ್ಲಿನ ಜೀವಿಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ ಎಂಬುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.