ಜಪಾನ್: ಆರೋಗ್ಯವಾಗಿರಲು ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ 8 ಗಂಟೆಗಳಷ್ಟು ನಿದ್ದೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ದಿನವೊಂದಕ್ಕೆ 30 ನಿಮಿಷ ನಿದ್ದೆ ಮಾಡುತ್ತಾರಂತೆ. ಆದರೂ ಆರೋಗ್ಯವಾಗಿದ್ದಾರಂತೆ. ಈ ವಿಷಯ ಕೇಳಿ ಈಗ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಕಡಿಮೆ ನಿದ್ದೆ ಮಾಡಿದರೆ ಮೆದುಳು ಮತ್ತು ದೇಹ ನಾವು ಮಾಡುವ ಕೆಲಸಕ್ಕೆ ಸಹಕರಿಸುವುದಿಲ್ಲ. ಆದರೂ ಜಪಾನಿನ ಈ ವ್ಯಕ್ತಿ 12 12 ವರ್ಷಗಳಿಂದ ದಿನಕ್ಕೆ 30 ನಿಮಿಷ ಮಾತ್ರ ನಿದ್ದೆ ಮಾಡುತ್ತಿದ್ದಾರಂತೆ. ಆದರೂ ಆರೋಗ್ಯವಾಗಿದ್ದಾರೆ.
40 ವರ್ಷದ ಪಶ್ಚಿಮ ಜಪಾನ್ ನ ಹ್ಯೊಗೊ ಪ್ರಿಫೆಕ್ಚರ್ ನ ಕಂಪನಿಯ ಸಂಸ್ಥಾಪಕ ಡೈಸುಕೆ ಹೋರಿ, ಇಷ್ಟೊಂದು ಕಡಿಮೆ ನಿದ್ದೆ ಮಾಡಿ ತಮ್ಮ ದೇಹ ಮತ್ತು ಮನಸ್ಸನ್ನು ಸಾಮಾನ್ಯ ಮನುಷ್ಯನಿಗಿಂತ ಎರಡು ಪಟ್ಟು ಹೆಚ್ಚು ಬದುಕಲು ತರಬೇತಿ ನೀಡಿದ್ದಾರಂತೆ. ಅವರು ಕಡಿಮೆ ನಿದ್ದೆ ಮಾಡಲು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಅಭ್ಯಾಸ ಈಗ ದಿನಕ್ಕೆ 30 ರಿಂದ 45 ನಿಮಿಷಗಳಿಗೆ ಬಂದು ನಿಂತಿದೆ.
ಎಷ್ಟು ಗಂಟೆ ನಿದ್ದೆ ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ಎಷ್ಟು ಗುಣಮಟ್ಟದ ನಿದ್ದೆ ಮಾಡಿದ್ದೇವೆ ಎನ್ನುವುದು ಮುಖ್ಯ ಅಂತಾರೆ. ಅಲ್ಲದೇ, ಈ ವ್ಯಕ್ತಿ ಈಗ 2016 ರಲ್ಲಿ ಹೋರಿ ಜಪಾನ್ ಶಾರ್ಟ್ ಸ್ಲೀಪರ್ಸ್ ಟ್ರೈನಿಂಗ್ ಅಸೋಸಿಯೇಷನ್ ನ್ನು ಸ್ಥಾಪಿಸಿದ್ದಾರೆ.
ಇವರಿಂದ ತರಬೇತಿ ಪಡೆದವರು ಕೂಡ ಈಗ ನಿದ್ದೆಯ ಸಮಯವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಯುವತಿಯೊಬ್ಬರು ತರಬೇತಿಯ ನಂತರ 8 ಗಂಟೆಯಿಂದ 90 ನಿಮಿಷಕ್ಕೆ ನಿದ್ದೆಯ ಸಮಯವನ್ನು ಕಡಿಮೆ ಮಾಡಿಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ಅದನ್ನೇ ಅನುಸರಿಸುತ್ತಿದ್ದು, ತ್ವಚೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲು ಸಮರ್ಥರಾಗಿದ್ದಾರೆ ಎನ್ನಲಾಗಿದೆ.