ರಾಮನಗರ: ಹೊರಗೆ ತಿನ್ನುವ ಬಹುತೇಕ ಆಹಾರ ಸೇಫ್ ಅಲ್ಲ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಹೋಟೆಲ್ ಗಳಲ್ಲಿ ರುಚಿಗೆ ಆದ್ಯತೆ ನೀಡುತ್ತಿರುವುದರಿಂದ ಆರೋಗ್ಯಕ್ಕೆ ಸೇಫ್ ಅಲ್ಲ ಎನ್ನಲಾಗುತ್ತಿದೆ. ಅಡುಗೆ ತಯಾರಿಸುವವರಿಂದಲೂ ವಿವಿಧ ಮಾದರಿಯ ರೋಗಗಳು ಹರಡುತ್ತಿವೆ. ಪ್ಯಾಕಿಂಗ್ ಗಳಿಂದ ಹಿಡಿದು, ಸೇವಿಸುವವರೆಗೂ ಎಲ್ಲಿಯೂ ಮಾನದಂಡಗಳು ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.
ಖರೀದ ಎಣ್ಣೆಯನ್ನು ಪದೇ ಪದೆ ಬಳಕೆ ಮಾಡುವುದರಿಂದ ಹೃದಯ ಸ್ತಂಭನ ಮಾತ್ರವಲ್ಲದೇ, ಶುಚಿತ್ವವಿಲ್ಲದ ಊಟದಿಂದಾಗಿ ಅಧಿಕ ತೂಕ, ರಕ್ತ ದೊತ್ತಡ, ಅಪೌಷ್ಟಿಕತೆ, ಮಧುವೇಹ, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಗಳು ಬರುವಂತಾಗುತ್ತಿದೆ. ಫುಡ್ ಕಲರ್ ಬಳಕೆ, ಪ್ಲಾಸ್ಟಿಕ್ ಕವರ್ ಗಳಲ್ಲಿ ಊಟ, ತಿಂಡಿಗಳ ಪಾರ್ಸಲ್, ನ್ಯೂಸ್ ಪೇಪರ್ ಗಳಲ್ಲಿ ತಿಂಡಿ ಮಾರಾಟ ಮಾಡುವುದು, ಕೆಮಿಕಲ್ಸ್ ಗಳ ಬಳಕೆ, ಟೇಸ್ಟಿಂಗ್ ಪೌಂಡರ್‌ಗಳಿಂದಾಗಿ ಅನೇಕ ರೋಗಗಳು ಹರಡುತ್ತಿರುವುದನ್ನು ಆರೋಗ್ಯ ಇಲಾಖೆ ಖಚಿತ ಸೂಚಿಸಿದೆ.
ಕಲುಷಿತ ನೀರಿನ ಬಳಕೆಯಿಂದಾಗಿ ರೋಗಗಳು ಉಲ್ಬಣಗೊಳ್ಳುತ್ತಿರುವುದು ವರದಿಯಿಂದ ದೃಢಪಟ್ಟಿವೆ. ಆಹಾರ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪನ್ನೀರು, ಕೇಕ್, ಕೋವಾ ಸೇರಿದಂತೆ 10ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಅದರಲ್ಲೂ ಕೇಕ್‌ಗಳನ್ನು ಇನ್ನಷ್ಟು ಅಂದಗೊಳಿಸಲು ಕಲರ್ ಬಳಕೆ ಹೆಚ್ಚಾಗಿದೆ ಎಂದ ದೂರಿನ ಹಿನ್ನೆಲೆಯಲ್ಲಿ ಅತೀ ಹೆಚ್ಚಾಗಿ ಕೇಕ್ ಮಾದರಿಗಳನ್ನೇ ಪರಿಕ್ಷೆಗೊಳಪಡಿಸಲಾಗಿದೆ. ಅವುಗಳಲ್ಲಿ ಹೆಚ್ಚಿನ ರಾಸಾಯನಿಕ ಬಳಕೆ ಕಂಡು ಬಂದಿದೆ.
ಆಹಾರ ಗುಣಮಟ್ಟದಿಂದ ಕೂಡಿಲ್ಲದಿರುವುದು, ಅಶುಚಿತ್ವ, ಎಕ್ಸ್ ಪೈರಿ ಮಾರಾಟ, ನ್ಯೂಸ್ ಪೇಪರ್, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇನ್ನಿತರ ನಿಯಮ ಉಲ್ಲಂಘಿಸುವುದು ಕಂಡು ಬಂದರೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ದೂರು ನೀಡಬಹುದು. ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು ಎಂದು ಹೇಳಲಾಗಿದೆ.