ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯಗೊಂಡರೂ ಭಾರತೀಯ ಕುಸ್ತಿ ಪಟು ವಿನೇಶ್ ಫೋಗಟ್ ಅವರ ತೀರ್ಪು ಮಾತ್ರ ಪ್ರಕಟವಾಗುತ್ತಿಲ್ಲ.
ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಿದ್ದ ಹಾಗೂ ಬೆಳ್ಳಿ ಪದಕ ಬೇಕೆಂದು ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ, ಕ್ರೀಡಾಕೂಟ ಮುಗಿಯುವ ವೇಳೆಗಾಗಿಯೇ ತೀರ್ಪು ಪ್ರಕಟವಾಗಬೇಕಿತ್ತು. ಆದರೆ, ಅದು ಪ್ರಕಟವಾಗಲಿಲ್ಲ. ಕೋರ್ಟ್ ದಿನಾಂಕವನ್ನು ಮುಂದೂಡತ್ತಲೇ ಬಂದಿತು.
ಇವತ್ತಾದರೂ ತೀರ್ಪು ಪ್ರಕಟವಾಗಬಹುದು ಎಂದು ಭಾರತೀಯರು ನಿರೀಕ್ಷಿಸಿದ್ದರು. ಆದರೆ, ಇದೀಗ ಈ ಪ್ರಕರಣದ ತೀರ್ಪನ್ನು ಮತ್ತೊಮ್ಮೆ ಮುಂದೂಡಲಾಗಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಖಚಿತಪಡಿಸಿದೆ.
ಐಒಎ ನೀಡಿರುವ ಮಾಹಿತಿಯಂತೆ, ಕ್ರೀಡಾ ನ್ಯಾಯಾಲಯವು ಇಂದಿನ ಬದಲು ಆಗಸ್ಟ್ 16 ರಂದು ರಾತ್ರಿ 9:30 ಕ್ಕೆ ತೀರ್ಪು ನೀಡಲಿದೆ ಎಂದು ತಿಳಿಸಿದೆ. ವಿನೇಶ್ ಫೋಗಟ್ ಗೆ ಬೆಳ್ಳಿ ಪದಕ ನೀಡಬೇಕೋ? ಅಥವಾ ಬೇಡವೋ? ಎಂಬುವುದನ್ನು ಕ್ರೀಡಾ ನ್ಯಾಯಾಲಯ ನಿರ್ಧರಿಸಬೇಕಿದೆ.
ಕುರಿತು ಈಗಾಗಲೇ ವಿಚಾರಣೆ ಪೂರ್ಣಗೊಂಡಿದೆ. ಈ ಹಿಂದೆ ಆಗಸ್ಟ್ 10 ರಂದು ನಿರ್ಧಾರ ಹೊರಬೀಳಬೇಕಿತ್ತು. ಆದರೆ ಅದನ್ನು ಆಗಸ್ಟ್ 13ಕ್ಕೆ ಮುಂದೂಡಲಾಗಿತ್ತು. ಈಗ ಮತ್ತೆ ಗಡುವನ್ನು ವಿಸ್ತರಣೆ ಮಾಡಲಾಗಿದ್ದು, ಆಗಸ್ಟ್ 16 ರಂದು ರಾತ್ರಿ 9:30 ಕ್ಕೆ ತೀರ್ಪು ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ.