ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ.
ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದು, ದರ್ಶನ್ ಆಂಡ್ ಟೀಂಗೆ ಸಂಕಷ್ಟ ಎದುರಾಗಿದೆ. ಪೌಷ್ಠಿಕ ಆಹಾರಗಳನ್ನು ಸೇವಿಸುತ್ತಾ, ವ್ಯಾಯಾಮ ಮಾಡುತ್ತಾ ದೈಹಿಕ ಆರೋಗ್ಯ ಕಾಪಾಡಿಕೊಂಡಿದ್ದ ದರ್ಶನ್, ಈಗ ಜೈಲು ಪಾಲಾಗಿದ್ದಾರೆ. ಆದರೆ, ಅವರಿಗೆ ಜೈಲಿನ ಊಟ ಸರಿ ಹೊಂದುತ್ತಿಲ್ಲ. ಮನೆಯೂಟಕ್ಕಾಗಿ ಮನವಿ ಮಾಡಿದ್ದರು. ಕೋರ್ಟ್ ಅವರ ಬೇಡಿಕೆಯನ್ನು ಮಾನ್ಯ ಮಾಡಲಿಲ್ಲ. ಹೀಗಾಗಿ ಅವರಿಗೆ ಜೈಲು ಊಟವೇ ಖಾಯಂ ಆಗಿ ಬಿಟ್ಟಿದೆ. ಈ ಮಧ್ಯೆ ಪತ್ನಿ ಆಗಾಗ ಭೇಟಿ ನೀಡಿ ದರ್ಶನ್ ರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ತೆರಳುತ್ತಿದ್ದಾರೆ.
ಮನೆಯೂಟ ನೀಡದಿದ್ದರೂ ಹಣ್ಣು-ಹಂಪಲುಗಳನ್ನು ಧಾರಾಳವಾಗಿ ನೀಡಬಹುದಾಗಿದೆ. ಸೋಮವಾರ ದರ್ಶನ್ ರನ್ನು ಕಾಣಲು ಬಂದಿದ್ದ ಪತ್ನಿ ವಿಜಯಲಕ್ಷ್ಮಿ ಹಾಗೂ ಕೆಲವರು ಬಂಧುಗಳು ದರ್ಶನ್ ಗಾಗಿ ಎರಡು ಬ್ಯಾಗ್ ಗಳಲ್ಲಿ ಹಣ್ಣುಗಳನ್ನು ತಂದಿದ್ದರು. ಆಗಸ್ಟ್ 18ರ ವರೆಗೆ ದರ್ಶನ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ಮುಂದುವರೆಯುವ ಸಾಧ್ಯತೆ ಇದೆ.