ಪ್ಯಾರಿಸ್ ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಪಾಕ್ ನ ಅರ್ಶದ್ ನಮೀದ್ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಆದರೆ ಅರ್ಶದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ ಗೆ ತೆರಳುವಾಗ ಒಂದು ರೂಪಾಯಿಯನ್ನೂ ಕೊಡದ ಪಾಕ್ ಸರ್ಕಾರ, ಈಗ ಚಿನ್ನ ಗೆದ್ದವನಿಂದಲೇ ಕಿತ್ತು ತಿನ್ನಲು ಮುಂದಾಗಿದೆ ಎನ್ನಲಾಗಿದೆ.
ಬೇರೆಯವರ ನೆರವಿನಿಂದ ನದೀಮ್ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಸರ್ಕಾರದ ನೆರವಿಲ್ಲದೆಯೂ ಚಿನ್ನ ಗೆದ್ದ ನದೀಮ್ , ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಆಘಾತ ಎದುರಿಸಿದ್ದಾರೆ. ಕಾರಣ ಅರ್ಶದ್ ನದೀಮ್ ಪಾಕಿಸ್ತಾನ ಸರ್ಕಾರಕ್ಕೆ 3 ಕೋಟಿ ರೂ. ಹಣ ಕಟ್ಟಬೇಕಿದೆ. ತೆರಿಗೆ ರೂಪದಲ್ಲಿ ಕನಿಷ್ಠ 3 ಕೋಟಿ ರೂಪಾಯಿ ಪಾವತಿ ಮಾಡಬೇಕಿದೆ. ಕ್ರೌಡ್ ಫಂಡಿಂಗ್ ಮೂಲಕ ಅರ್ಶದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ ಸೇರಿಕೊಂಡಿದ್ದರು. ಈಗ ಅದ್ಭುತ ಸಾಧನೆ ಮೂಲಕ ಅರ್ಶದ್ ನದೀಮ್ ಚಿನ್ನ ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಸೆಲೆಬ್ರೆಟಿಗಳು, ಉದ್ಯಮಿಗಳು, ಪಾಕ್ ನ ಪಂಜಾಬ್ ಸರ್ಕಾರ ಬಹುಮಾನ ಘೋಷಿಸಿದ್ದವು. ಆದರೆ, ಈಗ ಸರ್ಕಾರಕ್ಕೆ ಬಹುಮಾನಗಳ ಒಟ್ಟು ಮೊತ್ತದ ಮೇಲೆ ಶೇ. 15 ರಿಂದ 30 ರಷ್ಟು ತೆರಿಗೆಯನ್ನು ಅರ್ಶದ್ ನದೀಮ್ ಪಾವತಿಸಬೇಕಿದೆ.
ಪಾಕ್ ನ ಪಂಜಾಬ್ ಸಿಎಂ ಮರ್ಯಾಮ್ ನವಾಜ್ ನದೀಮ್‌ಗೆ 10 ಕೋಟಿ ಪಾಕಿಸ್ತಾನ ರೂಪಾಯಿ, ಸಿಂಧ್ ಸರ್ಕಾರ 5 ಕೋಟಿ ರೂ, ಪಾಕಿಸ್ತಾನದ ವಿಶ್ವ ಅಥ್ಲೆಟಿಕ್ಸ್ ಫೆಡರೇಶನ್ 1 ಕೋಟಿ 40 ಲಕ್ಷ ರೂ. ಕಮ್ರಾನ್ ತೆಸೊರಿ, ಕ್ರಿಕೆಟಿಗ ಅಹಮ್ಮದ್ ಶೆಹಜಾದ್ ಹಾಗೂ ಪಾಕ್ ಗಾಯಕ ಸೇರಿ ಒಟ್ಟು 30 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಉದ್ಯಮಿ ಸಲ್ಮಾನ್ ಇಕ್ಬಾಲ್ ಮನೆ ಘೋಷಿಸಿದ್ದಾರೆ.
ಭಾರತದಲ್ಲಿರುವಂತೆ ಪಾಕಿಸ್ತಾನದಲ್ಲಿ ಕೂಡ ಬಹುಮಾನ ಮೊತ್ತ, ಲಾಟರಿ ಮೊತ್ತ ಪಡೆದವರು ತೆರಿಗೆ ಪಾವತಿ ಮಾಡಬೇಕು. ಆದರೆ, ಇದರಲ್ಲಿ ಎರಡು ವಿಧಗಳಿದ್ದು, ಈಗಾಗಲೇ ತೆರಿಗೆ ಪಾವತಿದಾರರಾಗಿದ್ದರೆ ಶೇ. 15 ರಷ್ಟು ತೆರಗಿ ಪಾವತಿ ಮಾಡಬೇಕು. ತೆರಿಗೆ ಪಾವತಿ ಮಾಡದವರಿಗೆ ಬಹುಮಾನ ಅಥವಾ ಲಾಟರಿ ಬಂದರೆ ಶೇ. 30 ರಷ್ಟು ತೆರಿಗೆ ಪಾವತಿ ಮಾಡಬೇಕು. ಅರ್ಶದ್ ನದೀಮ್ ಈಗಾಗಲೇ ತೆರಿಗೆ ಪಾವತಿ ಮಾಡಿದ್ದರೆ ಸುಮಾರು 3 ಕೋಟಿ ರೂ. ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು. ಒಂದು ವೇಳೆ ಇದುವರೆಗೆ ತೆರಿಗೆ ಪಾವತಿ ಮಾಡದಿದ್ದರೆ ಶೇ. 30 ರಷ್ಟು ಮೊತವನ್ನು ಅಂದರೆ ಸರಿಸುಮಾರು 6 ಕೋಟಿ ರೂ. ಪಾವತಿಸಬೇಕಿದೆ. ಆದರೆ, ದೇಶಕ್ಕೆ ಕೀರ್ತಿ ತಂದ ವ್ಯಕ್ತಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಈಗ ಹಲವರು ಹೇಳುತ್ತಿದ್ದಾರೆ.