..ಕೇಂದ್ರ ರೈಲ್ವೆ, ಜಲ ಶಕ್ತಿ ರಾಜ್ಯ ಖಾತೆ ಸಚಿವ ಕೇಂದ್ರ ವಿ. ಸೋಮಣ್ಣ ಇಂದು ದೇಹಲಿಯಲ್ಲಿ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದರು.
ನಿಗಧಿಯಂತೆ ವಿ.ಸೋಮಣ್ಣರವರು ಚೌಹಾಣರನ್ನು ಭೇಟಿಯಾಗಿ ರಾಜ್ಯದ ಕೃಷಿ ಸಂಬಂಧಿತ ಕೆಲ ವಿಚಾರಗಳ ಬಗ್ಗೆ ಸಚಿವರ ಬಳಿ ಪ್ರಸ್ತಾಪಿಸಿ ಮನವರಿಕೆ ಮಾಡಿಕೊಟ್ಟರು. ಬಹು ಮುಖ್ಯವಾಗಿ ಉಂಡೇ ಕೊಬ್ಬರಿ ಹಣ ಪಾವತಿ ವಿಳಂಬವಾಗಿದ್ದು ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಆದುದರಿಂದ ₹691 ಕೋಟಿ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಸಚಿವರಿಂದಲೂ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೇಂದ್ರದಿಂದ ಶೀಘ್ರದಲ್ಲೇ ಹಣ ಬಿಡುಗಡೆಯಾಗುವ ನಿರೀಕ್ಷೆ ಮಾಡಲಾಗಿದೆ ಎಂದರು.
