ಪ್ಯಾರಿಸ್ ಒಲಿಂಪಿಕ್ಸ್ ನಿಂದ ಹೊರ ಬಿದ್ದ ವಿನೇಶ್ ಪೋಗಟ್ ಅವರ ಬಗ್ಗೆ ಇಡೀ ದೇಶವೇ ನೋವು ವ್ಯಕ್ತಪಡಿಸುತ್ತಿದೆ. ಈ ಮಧ್ಯೆ ಬಾಲಿವುಡ್ ತಾರೆಯರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ನಟಿ ಹೇಮಾಮಾಲಿನಿ ಅವರ ಮಾತು ಮಾತ್ರ ನೆಟ್ಟಿಗರನ್ನು ಕೆರಳಿಸಿದೆ.
ನಟಿ ಹಾಗೂ ಸಂಸೆದೆ ಹೇಮಾಮಾಲಿನಿ ಅವರು, ನಿಜಕ್ಕೂ ಈ ವಿಷಯ ಅಚ್ಚರಿ ಎನಿಸುತ್ತಿದೆ. ಅಲ್ಲದೇ, ವಿಚಿತ್ರ ಕೂಡ. ಕೇವಲ 100 ಗ್ರಾಂ ದೇಹದ ತೂಕ ಹೆಚ್ಚಿರುವ ಕಾರಣದಿಂದ ಅವರು ಅನರ್ಹಗೊಂಡಿದ್ದಾರೆ. ದೇಹದ ತೂಕ ಸರಿಯಾಗಿ ನೋಡಿಕೊಳ್ಳುವುದು ಮುಖ್ಯ. ಕಲಾವಿದರಿಗೆ, ಮಹಿಳೆಯರಿಗೆ ಇದು ಒಂದು ಪಾಠ. ವಿನೇಶ್ ಆದಷ್ಟು ಬೇಗ 100 ಗ್ರಾಂ ತೂಕ ಇಳಿಸಿಕೊಳ್ಳಲಿ. ಆದರೆ ಅವರಿಗೆ ಇನ್ನೊಂದು ಅವಕಾಶ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಇಂಥ ಹೇಳಿಕೆಗಳನ್ನು ನೀಡುವ ಹೇಮಾ ಮಾಲಿನಿ ಅವರು ಸಂಸದೆ ಆಗಲು ಅನರ್ಹರು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ‘ವಿನೇಶ್ ಫೋಗಟ್ ಅವರು ದೇಹದ ತೂಕ ನಿರ್ಲಕ್ಷಿಸಿ ಈ ರೀತಿ ಆಗಿದ್ದಲ್ಲ. ಸಮೋಸಾ, ಐಸ್ ಕ್ರೀಂ ತಿಂದು ಅವರು ತೂಕದ ತೂಕ ಹೆಚ್ಚಿಸಿಕೊಂಡಿಲ್ಲ. ಅವರು ಅನುಸರಿಸುವ ಕಠಿಣ ಡಯೆಟ್ ಮತ್ತು ತರಬೇತಿ ಬಗ್ಗೆ ನಿಮಗೆ ಗೊತ್ತಿಲ್ಲದೇ ಈ ರೀತಿ ಹೇಳಿಕೆ ನೀಡಬೇಡಿ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸದ್ಯ ಹಿರಿಯ ನಟಿ ಹೇಮಾಮಾಲಿನಿ ಅವರ ಪೋಸ್ಟ್ ಸಾಕಷ್ಟು ಟ್ರೋಲ್ ಗೆ ಕಾರಣವಾಗಿದೆ.