ರಾಮನಗರ: ರಾಜ್ಯಕ್ಕೆ ಮೂರು ಕ್ಷೇತ್ರಗಳ ಉಪ ಚುನಾವಣೆ ನಡೆಯಬೇಕಿದೆ. ಆದರೆ, ಚನ್ನಪಟ್ಟಣ ಕ್ಷೇತ್ರ ಮಾತ್ರ ಹೈವೋಲ್ಟೇಜ್ ಆಗಿ ಪರಿಣಮಿಸುತ್ತಿದೆ.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ರಾಜೀನಾಮೆ ನಂತರ ಖಾಲಿ ಇರುವ ಶಾಸಕ ಸ್ಥಾನಕ್ಕೆ ಈಗ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಮಧ್ಯೆಯೇ ಪೈಪೋಟಿ ಶುರುವಾಗಿದೆ. ಮಾಜಿ ಸಚಿವ ಸಿಪಿ ಯೋಗೇಶ್ವರ್(C. P. Yogeshwara) ಗೆ ಮೈತ್ರಿ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.
ಆದರೆ, ಟಿಕೆಟ್ ಸಿಕ್ಕರು ಸರಿ. ಇಲ್ಲವಾದರೂ ಸರಿ. ಸ್ವತಂತ್ರವಾಗಿಯಾದರೂ ಸ್ಪರ್ಧಿಸುತ್ತೇನೆ ಎಂದು ಸಿ.ಪಿ. ಯೋಗೇಶ್ವರ್ ನಿರ್ಧರಿಸಿದಂತಿದೆ. ಹೀಗಾಗಿ ತಮ್ಮ ಜನ ಬೆಂಬಲ ತೋರಿಸುವುದಕ್ಕಾಗಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದು, ಸಿಪಿವೈ ಬೆಂಬಲಿಗರು -ನಮ್ಮ ಶಾಸಕ, ನಮ್ಮ ಆಯ್ಕೆ ಎಂಬ ಟೈಟಲ್ ಅಡಿ ಟ್ರೆಂಡಿಂಗ್ ಶುರು ಮಾಡಿದ್ದಾರೆ.
ಈಗ ಸಿಪಿವೈ ಸೈಲೆಂಟ್ ಆಗಿ ಚನ್ನಪಟ್ಟಣದಲ್ಲಿ ತಮ್ಮ ಪವರ್ ಎಷ್ಟಿದೆ ಎಂದು ತೋರಿಸಲು ಸಿಪಿವೈ ಅಗಸ್ಟ್ 11ಕ್ಕೆ ನಮ್ಮ ಶಾಸಕ ನಮ್ಮ ಆಯ್ಕೆ ಟೈಟಲ್ ನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ಈ ಮೂಲಕ ಯೋಗೇಶ್ವರ್ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.