ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡು ತಿಂಗಳಾಗುತ್ತ ಬಂದಿದೆ. ಅವರ ಅಭಿಮಾನಿಗಳು ಮಾತ್ರ ಆರಾಧನೆ ಬಿಟ್ಟಿಲ್ಲ. ಸದ್ಯ ಅವರ ಅಭಿಮಾನಿಯೋರ್ವ ಹಣೆಯ ಮೇಲೆ ಡಿ ಬಾಸ್ ಎಂದು ಅಚ್ಚೆ ಹಾಕಿಸಿಕೊಂಡಿದ್ದು, ವಿಡಿಯೋ ಭಾರೀ ವೈರಲ್ ಆಗಿದೆ.
ಇತ್ತೀಚೆಗೆ ದರ್ಶನ್ ಖೈದಿ ಸಂಖ್ಯೆಯನ್ನು ಕೈ, ಕುತ್ತಿಗೆ, ಎದೆ ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು. ಈ ಮಧ್ಯೆ ಈ ಅಭಿಮಾನಿ ಡಿ ಬಾಸ್ ಹೆಸರನ್ನು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ʼಡಿ ಬಾಸ್ʼ ಹೆಸರನ್ನು ತನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ಕುರಿತ ಪೋಸ್ಟ್ ಒಂದನ್ನು karunada_adhipati_official ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. ಬಳಕೆದಾರರು ʼತಂದೆ-ತಾಯಿ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಬಿಟ್ಟು ಇದೆಲ್ಲಾ ಬೇಕಿತ್ತಾʼ ಎಂದು ಕಮೆಂಟ್ ಮಾಡಿದ್ದಾರೆ. ಇದೆಲ್ಲಾ ಶೋಕಿ ಬೇಕಾ?ʼ ಎಂದು ಹಲವರು ಪ್ರಶ್ನಿಸಿದ್ದರು. ಹಲವರು ಹಲವಾರು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.