ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case)ಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಹೇಗಾದರೂ ಮಾಡಿ ಪತಿಯನ್ನು ಪ್ರಕರಣದಿಂದ ಕಾಪಾಡಬೇಕೆಂದು ಪತ್ನಿ ವಿಜಯಲಕ್ಷ್ಮೀ ಪ್ರಯತ್ನಿಸುತ್ತಿದ್ದಾರೆ.
ಕಳೆದ 45 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ (Darshan) ನೋಡಲು ಬನಶಂಕರಿ ದೇವಿ ಪ್ರಸಾದದೊಂದಿಗೆ ಪತ್ನಿ ವಿಜಯಲಕ್ಷ್ಮಿ (Vijayalakshmi) ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ.
ಭಾನುವಾರ ಭೀಮನ ಅಮವಾಸ್ಯೆಯ ಹಿನ್ನೆಲೆಯಲ್ಲಿ ಶಕ್ತಿ ದೇವತೆ ಬನಶಂಕರಿ ದೇವಸ್ಥಾನದಲ್ಲಿ (Banashankari Temple) ಸಂಕಲ್ಪ ಪೂಜೆ ಮಾಡಿಸಿದ್ದರು. ಈ ಹಿನ್ನೆಲೆಯಲ್ಲಿ ದೇವಿ ಪ್ರಸಾದ ಹಿಡಿದು ದಿನಕರ್ ತೂಗುದೀಪ್ ಜೊತೆ ಮತ್ತೆ ವಿಜಯಲಕ್ಷ್ಮಿ ಜೈಲಿಗೆ ಭೇಟಿ ಕೊಟ್ಟಿದ್ದಾರೆ.
ಕಳೆದ ವಾರ ದರ್ಶನ್ ಸಂಕಷ್ಟವೆಲ್ಲಾ ನಿವಾರಣೆ ಆಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕೆ ತಾಯಿಗೆ ಚಂಡಿಕಾ ಯಾಗ ಮಾಡಿಸಿದ್ದರು. ಈಗ ಬನಶಂಕರಿ ದೇವಿಯ ಮೊರೆ ಹೋಗಿದ್ದಾರೆ.