ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಬಳಿ ಇಪ್ಪತ್ತಾರನೇ ತಾರೀಕು ರಾತ್ರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಬಂದಿತನಾಗಿದ್ದ ಪುನೀತ್ ಕೆರೆಹಳ್ಳಿಗೆ ನ್ಯಾಯಾಲವು ಜಾಮೀನು ಮಂಜೂರು ಮಾಡಿದೆ. ವಿಶ್ವ ಹಿಂದೂ ಪರಿಷತ್ತಿನ ವಿಧಿ ಪ್ರಕೋಸ್ಠ (Legal Cel) ವಕೀಲರ ಪಡೆಯ ಮುಂಚೂಣಿ ವಕೀಲರಾದ ಪ್ರಕಾಶ್ ಶೆಟ್ಟಿ ಮತ್ತು ಅಧಿವಕ್ತದ ವಕೀಲ ಉಮಾಶಂಕರ್ ಮೇಗುಂದಿ ಇಬ್ಬರೂ ಸೇರಿಕೊಂಡು ಪುನೀತ್ ಪರ ಸಮರ್ಥವಾಗಿ ವಾದ ಮಂಡಿಸಿದ ಪರಿಣಾಮ ನ್ಯಾಯಾಲಯ ಜಾಮೀನು ನೀಡಿದೆ.

ಅಸಲಿಗೆ ಅಂದು (26ಜುಲೈ) ರಾತ್ರಿ ರಾಜಾಸ್ಥಾನದಿಂದ ಮಾಂಸ ಬರುವ ಖಚಿತ ಮಾಹಿತಿಯೊಂದಿಗೆ ಪುನೀತ್ ಕೆರೆಹಳ್ಳಿ ತಂಡ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಿತ್ತು. ಅಬ್ದುಲ್ ರಜಾಕ್ ಎಂಬಾತನಿಗೆ ಸೇರಿದ ತೊಂಬತ್ತು ಬಾಕ್ಸ್ ಮಾಂಸ ನಿಲ್ದಾಣ ತಲುಪಿ ಹೊರ ಬರುತ್ತಿದ್ದಂತೆಯೇ ಸ್ಥಳದಲ್ಲಿ ಗಲಾಟೆ ಶುರುವಾಗಿದೆ. ಮೊದಲಿಂದಲೂ ಈ ಬಗ್ಗೆ ಮಾಹಿತಿ ಇದ್ದ ಬಗ್ಗೆ ತಿಳಿಸಿ, ಹೊರ ರಾಜ್ಯಗಳೀಂದ ಹೊಲಸು ಮಾಂಸ ತಂದು ಮಾರುತ್ತಿದ್ದೀರಿ ಎಂಬ ಆರೋಪ ಮಾಡುತ್ತಾ ಬಾಕ್ಸ್ ತೆರೆದು ತೋರುವಂತೆ ಪಟ್ಟು ಹಿಡಿಯುತ್ತಾರೆ. ಅಷ್ಟೊತ್ತಿಗಾಗಲೇ ಪೊಲೀಸರು, ಮಾಧ್ಯಮದವರು, ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನೇನು ಮಾಂಸದ ಬಾಕ್ಸ್ ಮೇಲೆ ಮುಗಿಬೀಳುವ ಹೊತ್ತಿಗೆ ಪೊಲೀಸರು ತಡೆದು ನಿಲ್ಲಿಸುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸೂಚನೆ ಅರಿತ ಅಬ್ದುಲ್ ರಜಾಕ್ ಖುದ್ದು ಸ್ಥಳಕ್ಕೆ ಬಂದಿದ್ದಾನೆ.

ಸಮಯ ಕಾದಿದ್ದ ಕೆರೆಹಳ್ಳಿ ತಂಡ ಮಾಂಸದ ಬಾಕ್ಸ್ ತೆರೆದು ತೋರಿಸುವಂತೆ ರಜಕ್ ಮೇಲೆ ಮುಗಿ ಬಿದ್ದಿದೆ. ವಾದವು ವಿವಾದವಾಗುವ ಹೊತ್ತಿಗೆ, ಆಹಾರ ಇಲಾಖೆಯವರು ಬಂದು ಬಾಕ್ಸ್ ತೆರೆದು ಮಾಂಸದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕೊಂಡೊಯ್ಯುತ್ತಾರೆ. ಇಲ್ಲಿ ನಿಜವಾದ ಸಮಸ್ಯೆ ಶುರುವಾಗೋದು! ಹೌದು, ಬಾಕ್ಸ್ ಒಳಗೆ ಹೊಲಸು ಮಾಂಸವಿದೆ ಎಂಬುದು ಅದು ಗಬ್ಬು ನಾರುತ್ತಿದ್ದಾಗಲೇ ಸಾರ್ವಜನಿಕರಿಗೆ ಸ್ಪಷ್ಟವಾಗಿತ್ತು. ಉದ್ದ ಬಾಲದ ಪ್ರಾಣಿ ಕಂಡು ಅದು ನಾಯಿ ಎಂಬ ಅನುಮಾನವು ಎಲ್ಲರ ಮನದಲ್ಲಿ ಗಟ್ಟಿಯಾಗಿತ್ತು. ನಂತರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸೂಚನೆಯೊಂದಿಗೆ ಪೊಲೀಸರು ಪುನೀತ್ ಕೆರೆ ಹಳ್ಳಿಯನ್ನು ವಶಕ್ಕೆ ಪಡೆಯುತ್ತಾರೆ. ಹಾಗೆ ವಶಕ್ಕೆ ಪಡೆದ ಪೊಲೀಸರು ಆತನ ಮೇಲೆ ಬೇಕಾ-ಬಿಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ವಲ್ಪದರಲ್ಲೇ ಠಾಣೆಯಲ್ಲಿ ಅಸ್ವಸ್ಥನಾಗುವ ಪುನೀತ್ ಕೆರೆಹಳ್ಳಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತೆ. ನಂತರದಲ್ಲಿ ಈ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ವಿಧಿ ಪ್ರಕೋಷ್ಠ ಪುನೀತ್ ನೆರವಿಗೆ ನಿಂತಿದೆ. ಅಂದು ನೇರವಾಗಿ ಪುನೀತ್ ಕೆರೆಹಳ್ಳಿಯನ್ನು ಜಡ್ಜ್ ಮನೆಗೆ ಕರೆದೊಯ್ದು ನಿಲ್ಲಿಸಲಾಗಿತ್ತು. ಅಲ್ಲಿ ವಕೀಲ ಪ್ರಕಾಶ್ ಶೆಟ್ಟಿ ಮತ್ತು ಉಮಾಶಂಕರ್ ಅವರ ಪಾಯಿಂಟ್ಸ್ ಗಳು ಎದುರಾಳಿಗಳ ಲೆಕ್ಕಾಚಾರ ತಲೆಕೆಳಗಾಗಿಸಿದೆ. ಪರಿಣಾಮ ಸದ್ಯ ನ್ಯಾಯಾಲಯ ನಿನ್ನೆ ಸಂಜೆ ಪುನೀತ್ ಕೆರೆಹಳ್ಳಿ ಶರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಹಾಗಿದ್ದರೆ ನಡೆದಿದ್ದಾದರೂ ಏನು? ವಕೀಲರ ವಾದವಾದರೂ ಏನಾಗಿತ್ತು?

ಹೌದು, ನಾಯಿ ಮಾಂಸ ತಂದಿದ್ದು, ಹಳೆ ಮಾಂಸ ತಂದಿದ್ದು ಎಂಬ ಆರೋಪದಡಿ ಸ್ಥಳದಲ್ಲಿ ವಾದ-ವಿವಾದವಾದಾಗ ಕಾಟನ್ ಪೇಟೆ ಪೊಲೀಸರು ಮಾಂಸ ತರಿಸಿದ್ದ ಅಬ್ದುಲ್ ರಜಾಕ್ ನನ್ನು ಏನೊಂದು ಪ್ರಶ್ನೆ ಮಾಡದೇ, ಹಳೆಯ ಮಾಂಸ ಎಂದು ಪ್ರಶ್ನೆ ಮಾಡಿದ ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದು ಯಾವ ನ್ಯಾಯ? ಕ್ರೈಂ ನಂಬರ್ 131/2024 ಅಡಿಯಲ್ಲಿ ಪೊಲೀಸರ ಕರ್ಯವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಹಾಗಿದ್ದರೇ, ಇದೇ ಕಳಪೆ ಮಾಂಸದ ಆಮದಿನ ವಿಚಾರವಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ದೂರು ಹಿಡಿದು ತಮ್ಮನ್ನು ಸಂಪರ್ಕಿಸಿದಾಗ ನೀವ್ಯಾಕೆ ಕರ್ತವ್ಯ ಮಾಡಲಿಲ್ಲ? ಸರ್ಕಾರ ಯಾಕೆ ಕಣ್ಣುಮುಚ್ಚಿ ಕೂತಿತ್ತು? ಅಷ್ಟಕ್ಕೂ ಪುನೀತ್ ಮೇಲೆ ಮ್ಯಾನ್ ಹ್ಯಾಂಡಲ್ ಮಾಡಿದ್ದು ತಪ್ಪಲ್ಲವೇ?ಎಂದು ಪೊಲೀಸರ ನಡೆ ಬಗ್ಗೆ ಪ್ರಶ್ನೆ ಇಡಲಾಯಿತು. ಇನ್ನು ಐದು ದಿನದ ಹಿಂದೆ ಕತ್ತರಿಸಿದ ಮಾಂಸವು ಮನುಷ್ಯ ತಿನ್ನಲು ಯೋಗ್ಯವಲ್ಲ. ಗೂಡ್ಸ್ ಟ್ರೈನ್ ನಲ್ಲಿ ತರಬೇಕಿದ್ದ ಮಾಂಸ ಪ್ಯಾಸೆಂಜರ್ ಟ್ರೈನಲ್ಲಿ ತಂದಿದ್ದು ತಪ್ಪು. ಸರಿಯಾದ ಕ್ರಮ ಬಳಸದೇ ತರ್ಮಾಕೋಲ್ ಬಾಕ್ಸ್ನಲ್ಲಿ ಮಾಂಸ ತುಂಬಿ ತಂದಿದ್ದು ತಪ್ಪು. ಬಾಕ್ಸ್ ಮೇಲೆ ಮೀನು ಎಂದು ಸ್ಟಿಕ್ಕರ್ ಅಂಟಿಸಿ, ಇತರೇ ಮಾಂಸ ತುಂಬಿ ತಂದಿದ್ದು ತಪ್ಪು ಮತ್ತು ಆ ಬಗ್ಗೆ ಅನುಮಾನವಿದೆ. ಅಸಲಿಗೆ ಅಂದು ಆಹಾರ ಪರೀಕ್ಷೆಗೆ ಸ್ಯಾಂಪಲ್ ಪಡೆದ ಅಧಿಕಾರಿಗಳು ನಂತರದಲ್ಲಿ ಉಳಿದ ಮಾಂಸವನ್ನು ಬಿಟ್ಟುಕೊಟ್ಟಿದ್ದು ದೊಡ್ಡ ತಪ್ಪಾಗಿದೆ. ಯಾವುದೋ ಒತ್ತಡಕ್ಕೆ ಮಣಿದು ಆಹಾರದ ಗುಣಮಟ್ಪದ ಪರೀಕ್ಷೆಗೂ ಮೊದಲೇ ಅನುಮಾನಾಸ್ಪದವಾದ ಮಾಂಸವನ್ನು ಬಿಟ್ಟುಕೊಡಬಾರದಿತ್ತು ಎಂಬ ಥರದಲ್ಲಿ ವಕೀಲರು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದಾರೆ. ನ್ಯಾಯಾಲಯ ಸದ್ಯ ಪುನೀತ್ ಕೆರೆಹಳ್ಳಿಗೆ ಜಾಮೀನು ನೀಡಿ, ಪ್ರಕರಣದ ವಿಚಾರಣೆ ಮುಂದೂಡಿದೆ.
ಏನೇ ಹೇಳಿ ಅಂದು ಬಂದಿದ್ದು ನಾಯಿ ಮಾಂಸ ಎಂದಾಗ ವಿಶೇಷವಾಗಿ ಬೆಂಗಳೂರು ಮಾಂಸಪ್ರಿಯರಿಗೆ ಮೈಜುಮ್ಮೆಂದಿತ್ತು. ಕಾರಣ ಅಂದು ಬಂದಿದ್ದು ಬರೋಬ್ಬರಿ ನಾಲ್ಕು ಸಾವಿರ ಕೆಜಿ ಮಟನ್! ಬೆಂಗಳೂರಿನ ಸುತ್ತ ಇಪ್ಪತ್ತು ಸೆಂಟರ್ ಮೂಲಕ ಮಾಂಸ ಮಾರುತ್ತಿದ್ದ ರಜಾಕ್ ತಂಡ ಸುಮಾರು ಸಮಯದಿಂದ ಈ ದಂಧೆ ಮಾಡುತ್ತಲೇ ಬಂದಿದೆ ಎಂದು ಆರೋಪಿಸಲಾಗುತ್ತಿದೆ. ಈ ಹಿಂದೆ ಬೆಂಗಳೂರಿನ ಗೊರಗುಂಟೆಪಾಳ್ಯದ ಸ್ಟಾರ್ ಹೊಟೇಲ್ ಒಂದರಲ್ಲಿ ಮಾಂಸ ಪರೀಕ್ಷೆ ಮಾಡಲು ಹೋದಾಗ ಸಿಕ್ಕ ಮಾಂಸಗಳಲ್ಲಿ ಹುಳಗಳು ಕಾಣಿಸಿಕೊಂಡು ಅಸಹ್ಯ ಹುಟ್ಟಿಸಿತ್ತು. ಇದೀಗ ಐದಾರು ದಿನದ ಹಳೆಯ ಹೊರ ರಾಜ್ಯದ ಮಾಂಸ ಗಬ್ಬು ನಾರುತ್ತಾ ಬೆಂಗಳೂರು ತಲುಪುತ್ತಿದ್ದ ವಿಚಾರ ತಲೆಕೆಡಿಸಿದೆ. ವಿಪರ್ಯಾಸವೆಂದರೇ, ಹಳೆಯ ಗಬ್ಬು ಮಾಂಸ ತಂದವರ ಮೇಲೆ ಕ್ರಮವಾಗದೇ ಪ್ರಶ್ನಿಸಿದವನನ್ನು ಕರೆದೊಯ್ದು ಅಸಹ್ಯಪಡಿಸಿದ್ದು ಮೇಲ್ನೋಟಕ್ಕೆ ಏನನಿಸುತ್ತಿದೆ? ನೀವೇ ಯೋಚಿಸಿ.