ನಟ ಆರ್. ಮಾಧವನ್ ಭಾರೀ ಮೌಲ್ಯದ ಬಂಗಲೆ ಖರೀದಿಸುವ ಮೂಲಕ ಸುದ್ದಿ ಆಗಿದ್ದಾರೆ.
ಬಹುಬೇಡಿಕೆಯ ಕಲಾವಿದನಾಗಿರುವ ಮಾಧವನ್ ಈಗಾಗಲೇ ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಈಗ ಮುಂಬೈನಲ್ಲಿ ಅವರು ದೊಡ್ಡ ಬಂಗಲೆಗೆ ಒಡೆಯನಾಗಿದ್ದಾರೆ. ಈ ಬಂಗಲೆಯ ಬೆಲೆ ಬರೋಬ್ಬರಿ 17.5 ಕೋಟಿ ರೂಪಾಯಿ.
ಈ ಮನೆಯೇ ಅವರ ಹೊಸ ವಿಳಾಸವಾಗಿರುತ್ತದೆ ಎನ್ನಲಾಗಿದೆ. ಆರ್. ಮಾಧವನ್ ಅವರ ಪಾಲಿಗೆ 2024ರ ವರ್ಷ ಲಾಭದಾಯಕವಾಗಿದೆ. ಅವರು ನಟಿಸಿದ ‘ಶೈತಾನ್’ ಸಿನಿಮಾ ಮಾರ್ಚ್ 8ರಂದು ಬಿಡುಗಡೆ ಆಯಿತು. ಹಾರರ್ ಕಥಾಹಂದರ ಇರುವ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿತು. ಇದರಲ್ಲಿ ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ‘ಶೈತಾನ್’ ಸಕ್ಸಸ್ ನಂತರ ಮಾಧವನ್ ಅವರಿಗೆ ಇದ್ದ ಬೇಡಿಕೆ ಡಬಲ್ ಆಗಿದೆ.

ಕೈ ತುಂಬ ಸಂಭಾವನೆ ಪಡೆಯುವ ಆರ್. ಮಾಧವನ್ ಅವರು ಮುಂಬೈನಲ್ಲಿ ಖರೀದಿಸಿರುವ ಹೊಸ ಮನೆ ಬರೋಬ್ಬರಿ 4,182 ಚದರ ಅಡಿ ವಿಸ್ತೀರ್ಣ ಹೊಂದಿದೆ. ಎರಡು ಪಾರ್ಕಿಂಗ್ ಸ್ಪೇಸ್ ಇದರಲ್ಲಿದೆ. ಕೂಡಲೇ ಶಿಫ್ಟ್ ಆಗಿ ವಾಸಿಸಲು ಬೇಕಾದ ಎಲ್ಲ ಸೌಲಭ್ಯಗಳು ಇದರಲ್ಲಿವೆ. ಯಾವ ಸ್ಟಾರ್ ಹೋಟೆಲ್ ಗೂ ಇದು ಕಡಿಮೆ ಇಲ್ಲ ಎನ್ನಲಾಗಿದೆ. ಸದ್ಯ ಅಭಿಮಾನಿಗಳು ಹೊಸ ಮನೆ ಖರೀದಿಸಿದ್ದಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.