ಪುರುಷಕರು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆಂಬ ಸಾವಿರಾರು ಪ್ರಕರಣಗಳನ್ನು ನಾವು ಕೇಳಿಯೇ ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ಮಹಿಳೆಯು ಬರೋಬ್ಬರಿ 50ಕ್ಕೂ ಅಧಿಕ ಪುರುಷರಿಗೆ ಮೋಸ ಮಾಡಿರುವ ಘಟನೆ ನಡೆದಿದೆ.
ತಮಿಳುನಾಡಿನ ತಿರುಪ್ಪೂರ್ ನಲ್ಲಿ ಈ ಘಟನೆ ನಡೆದಿದೆ. ಪುರುಷರನ್ನು ಮದುವೆಯಾಗಿ ಅಥವಾ ವಂಚಿಸಿ ಮನೆಯಿಂದ ಲಕ್ಷಗಟ್ಟಲೆ ನಗದು, ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗುತ್ತಿದ್ದಳು. ಈ ಕುರಿತು ತುರುಪುರದ ತಾರಾಪುರಂನಲ್ಲಿ ನೆಲೆಸಿರುವ ಮಹೇಶ್ ಅರವಿಂದ್ ಎಂಬುವವರು ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಮಹಿಳೆ ವಯಸ್ಸು 30 ವರ್ಷ, ಮೊಬೈಲ್ ಆಪ್ ಮೂಲಕ ಈರೋಡ್ ಜಿಲ್ಲೆಯ ಕೊಡುಮುಡಿ ನಿವಾಸಿ ಸಂಧ್ಯಾ ಅವರನ್ನು ಭೇಟಿಯಾಗಿದ್ದರು.ಆನಂತರ ಪಳನಿ ಬಳಿಯ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ.
ಮಹೇಶ್ ಅರವಿಂದ್ ಹೇಳುವಂತೆ ಸಂಧ್ಯಾಳನ್ನು ಮನೆಗೆ ಕರೆ ತಂದರೂ ನಡೆ ಅನುಮಾನಕ್ಕೆ ಕಾರಣವಾಗುತ್ತಿತ್ತು. ಆಧಾರ್ ಕಾರ್ಡ್ ನೋಡಿದಾಗ ಸಂಧ್ಯಾ ಹೆಸರಿನ ಬದಲು ಚೆನ್ನೈ ಮೂಲದ ಮತ್ತೊಬ್ಬ ಮಹಿಳೆಯ ಹೆಸರು ಬರೆಯಲಾಗಿತ್ತು. ವಯಸ್ಸು ಕೂಡ ಹೆಚ್ಚಿತ್ತು. ಈ ವಿಚಾರ ಪ್ರಶ್ನಿಸಿದಾಗ ಆಕೆ ಮಹೇಶ್ ಕುಟುಂಬದವರಿಗೆ ಬೆದರಿಕೆ ಹಾಕಿದ್ದಳು.
ಆನಂತರ ಮಹೇಶ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬರುವಷ್ಟರೊಳಗೆ ಸಂಧ್ಯಾ ಅಲ್ಲಿಂದ ಓಡಿ ಹೋಗಿದ್ದಳು. ಆರೋಪಿ ಮಹಿಳೆ ಸಂಧ್ಯಾ 10 ವರ್ಷಗಳ ಹಿಂದೆ ಚೆನ್ನೈನಲ್ಲಿ ನೆಲೆಸಿರುವ ಯುವಕನೊಂದಿಗೆ ವಿವಾಹವಾಗಿದ್ದಳು ಎಂದು ತಿಳಿದು ಬಂದಿದೆ.
ಸಂಧ್ಯಾ ವಯಸ್ಸಾದ ಅವಿವಾಹಿತ ಪುರುಷರನ್ನು ಹುಡುಕಿ ಅವರನ್ನು ಮದುವೆಯಾಗಿ ಅಥವಾ ನಂಬಿಸಿ ವಂಚನೆ ಮಾಡುತ್ತಿದ್ದಳು. ಹೀಗೆ 50 ಪುರುಷರಿಗೆ ಮೋಸ ಮಾಡಿದ್ದಾಳೆ ಎನ್ನಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.