ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾಗೌಡ ಶೆಡ್ ನಲ್ಲಿ ನಡೆದ ಸತ್ಯವನ್ನು ಪೊಲೀಸರ ಎದುರು ಬಾಯಿ ಬಿಟ್ಟಿದ್ದರು ಎಂದು ತಿಳಿದು ಬಂದಿದೆ.
ಕೊಲೆಯಾಗಿರುವ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ್ದಾಗಿ ಪೊಲೀಸರ ತನಿಖೆಗೆ ವೇಳೆ ಕೊಲೆ ಆರೋಪಿ ನಟ ದರ್ಶನ್ ವಿರುದ್ಧವಾಗಿಯೇ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ನಾನು ಚಪ್ಪಲಿಯಲ್ಲಿ ಒಮ್ಮೆ ಹೊಡೆದು ಸುಮ್ಮನೆ ನಿಂತೆ. ಆಗ ದರ್ಶನ್, ರೇಣುಕಾಸ್ವಾಮಿ ಮೇಲೆ ಮನಬಂದಂತೆ ಥಳಿಸಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ನಾನು ಶೆಡ್ ಗೆ ಹೋಗುವುದಕ್ಕೂ ಮುಂಚೆ ದರ್ಶನ್ ಶೆಡ್‍ನಲ್ಲಿದ್ದರು ಎಂಬುವುದಾಗಿ ಕೂಡ ಪವಿತ್ರಾ ಗೌಡ (Pavithra Gowda) ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪೊಲೀಸರ ಮುಂದೆ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಪವಿತ್ರಾ ಗೌಡ ಈ ಹೇಳಿಕೆಯನ್ನು ನಟ ದರ್ಶನ್ ಕೂಡ ನಿರೀಕ್ಷೆ ಮಾಡಿರಲಿಕ್ಕಿಲ್ಲ.
ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡಗೆ ಅಶ್ಲೀಲ ಮೆಸೆಜ್ ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ, ಅದೇ ಪವಿತ್ರಾಗೌಡ ದರ್ಶನ್ ವಿರುದ್ಧ ಹೇಳಿಕೆ ನೀಡಿರುವುದು ದರ್ಶನ್ ಗೆ ಸಂಕಷ್ಟ ತಂದಂತಾಗಿದೆ.