
T20 World Cup 2024ರ ಚಾಂಪಿಯನ್ ಆಗಿ ಭಾರತ ತಂಡ ಹೊರ ಹೊಮ್ಮಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಈ ಪಂದ್ಯ ರಣರೋಚಕತೆಯಿಂದ ಕೂಡಿತ್ತು. ಒಮ್ಮೆ ಭಾರತದ ಪರ ವಾಲಿದ್ದ ಪಂದ್ಯ ಮತ್ತೊಮ್ಮೆ ಆಫ್ರಿಕಾ ಪರ ವಾಲುತ್ತಿತ್ತು. ಈ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ನೀಡಿದ್ದೆ ಬುಮ್ರಾ ಹಾಗೂ ಕೊಹ್ಲಿ ಎಂದರೆ ತಪ್ಪಾಗಲಾರದು.
76 ರನ್ ಗಳನ್ನು ಸಿಡಿಸಿ ಕಿಂಗ್ ಕೊಹ್ಲಿ ಟೀಮ್ ಇಂಡಿಯಾ 176 ರನ್ ಸೇರಿಸಲು ನೆರವಾದರೆ, ಈ ಗುರಿಯನ್ನು ಬೆನ್ನತ್ತುತ್ತಿದ್ದಂತೆ ದಕ್ಷಿಣ ಆಫ್ರಿಕಾ ಆಟಗಾರರನ್ನು ತಡೆಯುವಲ್ಲಿ ಜಸ್ಪ್ರೀತ್ ಬುಮ್ರಾ ಪಾತ್ರ ದೊಡ್ಡದಿದೆ. ಕೊನೆಯ 5 ಓವರ್ಗಳಲ್ಲಿ ಬುಮ್ರಾ ಎಸೆದ 2 ಓವರ್ ಗಳು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದವು.

15 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ತಂಡವು 147 ರನ್ ಬಾರಿಸಿ ಗೆಲುವಿನತ್ತ ಮುಖ ಮಾಡಿತ್ತು. ಆಗ ಕೊನೆಯ 30 ಎಸೆತಗಳಲ್ಲಿ ಬೇಕಿದದ್ದು ಕೇವಲ 30 ರನ್ ಗಳು. ಈ ಹಂತದಲ್ಲಿ ದಾಳಿಗಿಳಿದ ಬುಮ್ರಾ ಸೌತ್ ಆಫ್ರಿಕಾ ಬ್ಯಾಟರ್ ಗಳ ಮೇಲೆ ಒತ್ತಡ ಹೇರಿದರು. 16ನೇ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ ನೀಡಿದ್ದು ಕೇವಲ 4 ರನ್. ಇದರಿಂದ ಒತ್ತಡಕ್ಕೆ ಸಿಲುಕಿದ ಹೆನ್ರಿಕ್ ಕ್ಲಾಸೆನ್ 17ನೇ ಓವರ್ ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಆ ಓವರ್ ನಲ್ಲಿಯೂ ಪಾಂಡ್ಯ ನೀಡಿದ್ದು ಕೇವಲ 4 ರನ್. ನಂತರ 18ನೇ ಓವರ್ ಗೆ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಮಾರ್ಕೊ ಯಾನ್ಸೆನ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಓವರ್ ನಲ್ಲಿ ಬುಮ್ರಾ ನೀಡಿದ್ದು ಕೇವಲ 2 ರನ್. ಆಗಲೇ ನೋಡಿ ಮ್ಯಾಚ್ ಟರ್ನ್ ಆಗಿದ್ದು.

ಸೌತ್ ಆಫ್ರಿಕಾ ಪಾಲಿಗೆ ನಿರ್ಣಾಯಕವಾಗಿದ್ದ ಕೊನೆಯ ಎರಡು ಓವರ್ ಗಳಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 6 ರನ್ ಗಳನ್ನು ಮಾತ್ರ ಮಾತ್ರ ನೀಡಿದ್ದರು. ಪರಿಣಾಮ ಸೌತ್ ಆಫ್ರಿಕಾ ತಂಡದ ಗುರಿ ಅಂತಿಮ 2 ಓವರ್ ಗಳಲ್ಲಿ 20 ರನ್ ಗಳಿಗೆ ಬಂದು ನಿಂತಿದೆ. ಆಗ 19ನೇ ಓವರ್ ಎಸೆದ ಅರ್ಷದೀಪ್ ಸಿಂಗ್ 4 ರನ್ ಮಾತ್ರ ನೀಡಿದರು. ಅದರಂತೆ ಕೊನೆಯ ಓವರ್ ಗೆ 16 ರನ್ ಬೇಕಾದವು. 16 ರನ್ ಗುರಿ ಪಡೆದ ಸೌತ್ ಆಫ್ರಿಕಾ ತಂಡಕ್ಕೆ ಡೇವಿಡ್ ಮಿಲ್ಲರ್ ಗೆಲುವಿನ ಭರವಸೆ ಮೂಡಿಸಿದ್ದರು.
ಆದರೆ ಹಾರ್ದಿಕ್ ಪಾಂಡ್ಯ ಎಸೆದ 20ನೇ ಓವರ್ ನ ಮೊದಲ ಎಸೆತದಲ್ಲಿ ಬೌಂಡರಿ ಲೈನ್ನನ್ ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಟ್ ನಿಂದಾಗಿ ಡೇವಿಡ್ ಮಿಲ್ಲರ್ ಇನಿಂಗ್ಸ್ ಅಂತ್ಯಗೊಂಡಿತು. ಆ ಓವರ್ ನಲ್ಲಿ ಆಫ್ರಿಕಾಗೆ ಬಿಟ್ಟುಕೊಟ್ಟಿದ್ದು ಕೇವಲ 8 ರನ್ ಹೀಗಾಗಿ ಭಾರತ ತಂಡ 7 ರನ್ ಗಳಿಂದ ಜಯಶಾಲಿಯಾಯಿತು. 4 ಓವರ್ ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು.
